ಉಡುಪಿ, ಆ.10: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್, ಜೇಸಿಐ ಬೆಳ್ಮಣ್ಣು, ಯುವ ಜೇಸಿ ವಿಭಾಗ ಮತ್ತು ಮಹಿಳಾ ಜೇಸಿ ವಿಭಾಗ ಇದರ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆಯು ಆಗಸ್ಟ್ 25ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10-00ರಿಂದ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಲಿದೆ.
ಸ್ಪರ್ಧೆಯ ಸೂಚನೆ – ನಿಯಮಾವಾಳಿಗಳು: ಕೃಷ್ಣ ವೇಷ ಸ್ಪರ್ಧೆಯು ನಾಲ್ಕು ವಿಭಾಗದಲ್ಲಿ ನಡೆಯಲಿದೆ. ಸ್ಪರ್ಧೆಯ ವಿಭಾಗ 0-02 ವರ್ಷದ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ, 02-04 ವರ್ಷದ ಮಕ್ಕಳಿಗೆ ಬಾಲ ಕೃಷ್ಣ ಸ್ಪರ್ಧೆ, 04-06 ವರ್ಷದ ಮಕ್ಕಳಿಗೆ ಚೆಲ್ವ ಕೃಷ್ಣ ಸ್ಪರ್ಧೆ, ತಾಯಿ ಮತ್ತು 7 ವರ್ಷದ ಒಳಗಿನ ಮಗುವಿನೊಂದಿಗೆ ಯಶೋಧೆ ಕೃಷ್ಣ ಸ್ಪರ್ಧೆ ಜರಗಲಿದೆ. ಮುದ್ದು ಕೃಷ್ಣ, ಬಾಲ ಕೃಷ್ಣ, ಚೆಲ್ವ ಕೃಷ್ಣ ಸ್ಪರ್ಧೆಗೆ ಮೊದಲು ಹೆಸರು ನೊಂದಾಯಿಸಿದ ತಲಾ 20 ಸ್ಪರ್ಧಿಗಳಿಗೆ ಮಾತ್ರ ಅವಕಾಶ, ಯಶೋಧೆ ಕೃಷ್ಣ ಸ್ಪರ್ಧೆ ಮೊದಲು ಹೆಸರು ನೊಂದಾಯಿಸಿದ ತಲಾ 10 ಸ್ಪರ್ಧಿಗಳಿಗೆ ಮಾತ್ರ ಅವಕಾಶ.
ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರ ಹಾಗೂ ವಿಶೇಷ ಬಹುಮಾನ ನೀಡಿ ಗೌರವಿಸಲಾಗುವುದು. ಪ್ರತಿ ವಿಭಾಗದ ಪ್ರಥಮ ಸ್ಥಾನ ವಿಜೇತರಿಗೆ ಬೆಳ್ಳಿ ನಾಣ್ಯ, ಆಕರ್ಷಕ ಬಹುಮಾನ ಹಾಗೂ ಗೌರವ ಸ್ಮರಣಿಕೆ, ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ವಿಜೇತರಿಗೆ ಆಕರ್ಷಕ ಬಹುಮಾನ ಮತ್ತು ಗೌರವ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಹೆಸರು ನೊಂದಾವಣೆಗಾಗಿ ಸಂಪರ್ಕಿಸಿ: 9902171267, 9591319024, 7026055284, 9164571441 ಸ್ಪರ್ಧೆಗೆ ಹೆಸರು ನೊಂದಾಯಿಸಲು ಕೊನೆಯ ದಿನಾಂಕ: 20 ಆಗಸ್ಟ್ 2024 ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಹಾಗೂ ಬೆಳ್ಮಣ್ಣು ಜೇಸಿಐ ಅಧ್ಯಕ್ಷೆ ಸರಿತಾ ದಿನೇಶ್ ಸುವರ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.