ಉಡುಪಿ, ಆ.9: ಜಿಲ್ಲೆಯ ಎಲ್ಲಾ ಗರ್ಭಿಣಿಯರು ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟು ತಾಯಿ ಕಾರ್ಡ್ ಪಡೆದು ಆರ್.ಸಿ.ಹೆಚ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ತಪಾಸಣೆ/ಸ್ಕ್ಯಾನಿಂಗ್‌ಗೆ ಒಳಪಡಲು ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಹೋಗುವಾಗ ತಾಯಿ ಕಾರ್ಡ್ ತೆಗೆದುಕೊಂಡು ಹೋಗಬೇಕು. ಆರೋಗ್ಯ ಸಂಸ್ಥೆಗಳು ತಪಾಸಣೆಗೆ ಒಳಪಟ್ಟ ವಿವರಗಳನ್ನು ತಾಯಿ ಕಾರ್ಡ್ನಲ್ಲಿ ನಮೂದಿಸಬೇಕು. ಗರ್ಭಿಣಿಯರಿಗೆ ಎಂ.ಟಿ.ಪಿ (ಎಂ.ಎಂ.ಎ ಡ್ರಗ್ಸ್ನ್ನು) ನೀಡುವ ಖಾಸಗಿ ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಮ್‌ನವರು ಇ-ಕಲ್ಯಾಣಿ ಸಾಫ್ಟ್ವೇರ್‌ನಲ್ಲಿ ಕಡ್ಡಾಯವಾಗಿ ಎಂ.ಟಿ.ಪಿ ಕಾಯ್ದೆ ಹಾಗೂ ಪಿ.ಸಿ.ಪಿ.ಎನ್.ಡಿ.ಟಿ ಕಾನೂನಿನಡಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಗರ್ಭಿಣಿಯರ ತಪಾಸಣೆಗೆ ತಾಯಿ ಕಾರ್ಡ್ ಕಡ್ಡಾಯ
ಗರ್ಭಿಣಿಯರ ತಪಾಸಣೆಗೆ ತಾಯಿ ಕಾರ್ಡ್ ಕಡ್ಡಾಯ
Date: