ಉಡುಪಿ, ಜು.15: ನಗರದ ಜಿಲ್ಲಾ ಆಸ್ಪತ್ರೆಯ ಡಿ.ಎನ್.ಬಿ ಶೈಕ್ಷಣಿಕ ಕೇಂದ್ರದ ಮಾನಸಿಕ ವಿಭಾಗದ ಮನೋವೈದ್ಯಶಾಸ್ತ್ರ ಹಾಗೂ ಎಂ.ಬಿ.ಬಿ.ಎಸ್ ವಿಭಾಗಕ್ಕೆ ತಲಾ ಒಬ್ಬರಂತೆ ಕಿರಿಯ ಸಲಹೆಗಾರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಜುಲೈ 18 ರಂದು ಬೆಳಗ್ಗೆ 11 ಗಂಟೆಗೆ ನಗರದ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಮನೋವೈದ್ಯಶಾಸ್ತ್ರ ವಿಭಾಗಕ್ಕೆ ಸಂಬಂಧಿಸಿದಂತೆ ಗರಿಷ್ಠ 45 ವರ್ಷ ವಯೋಮಿತಿಯ, ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕನಿಷ್ಠ ಪೋಸ್ಟ್ ಪಿ.ಜಿ ಯಲ್ಲಿ ಐದು ವರ್ಷಗಳ ಅನುಭವ ಹೊಂದಿರುವ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಡಿ.ಎನ್.ಬಿ ಕಾರ್ಯಕ್ರಮದಡಿ ಕರ್ತವ್ಯ ನಿರ್ವಹಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿ ಪ್ರಕಟಣೆ ತಿಳಿಸಿದೆ.
ಜು. 18: ಉಡುಪಿಯಲ್ಲಿ ನೇರ ಸಂದರ್ಶನ
ಜು. 18: ಉಡುಪಿಯಲ್ಲಿ ನೇರ ಸಂದರ್ಶನ
Date: