ನವದೆಹಲಿ, ಮೇ 14: ಕೀನ್ಯಾದಲ್ಲಿ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಭಾರತದಿಂದ ವಾಯುಪಡೆಯ ವಿಶೇಷ ವಿಮಾನದಲ್ಲಿ 40 ಟನ್ ಔಷಧಿಗಳು, ವೈದ್ಯಕೀಯ ಸರಬರಾಜುಗಳು ಮತ್ತು ಇತರ ಉಪಕರಣಗಳನ್ನು ಒಳಗೊಂಡಂತೆ ಎರಡನೇ ಹಂತದ ಮಾನವೀಯ ಸಹಾಯವನ್ನು ಕಳುಹಿಸಲಾಗಿದೆ. ಟೆಂಟ್‌ಗಳು, ಹೊದಿಕೆಗಳು, ವಿದ್ಯುತ್ ಉತ್ಪಾದನಾ ಸೆಟ್‌ಗಳು, ಮೂಲಭೂತ ನೈರ್ಮಲ್ಯ ಉಪಯುಕ್ತತೆಗಳು, ನೈರ್ಮಲ್ಯ ಕಿಟ್‌ಗಳು, ಶಿಶು ಆಹಾರ, ಮಲೇರಿಯಾ ಮತ್ತು ಡೆಂಗ್ಯೂ ರೋಗನಿರ್ಣಯದ ಕಿಟ್‌ಗಳನ್ನು ಈಗಾಗಲೇ ರವಾನಿಸಲಾಗಿದೆ. ನೌಕಾಪಡೆಯ ನೌಕೆ ಸುಮೇಧಾದಲ್ಲಿ ಮೊದಲ ಹಂತದ ಸಹಾಯವನ್ನು ಕಳುಹಿಸಲಾಯಿತು, ಮೇ 10 ರಂದು ಕೀನ್ಯಾ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಇದು ಪ್ರವಾಹ ಸಂತ್ರಸ್ತರಿಗೆ ಆಹಾರ, ಪರಿಹಾರ ಮತ್ತು ಔಷಧ ಸಾಮಗ್ರಿಗಳನ್ನು ಒಳಗೊಂಡಿತ್ತು. ಭಾರತದ ಬದ್ಧತೆಯ ಪ್ರತೀಕವಾಗಿ ಮತ್ತು ಕೀನ್ಯಾದೊಂದಿಗೆನ ಸೌಹಾರ್ದ ಸಂಬಂಧವನ್ನು ಬಲಪಡಿಸುವ ಸಲುವಾಗಿ ತುರ್ತಾಗಿ ಸಯಾವನ್ನು ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಧಾರಾಕಾರ ಮಳೆಯಿಂದ ಆಫ್ರಿಕಾದ ಹಲವು ಪ್ರದೇಶಗಳು ತತ್ತರಿಸಿ ಹೋಗಿವೆ. 267 ಜನರು ಸಾವನ್ನಪ್ಪಿದ್ದಾರೆ, 188 ಜನರು ಗಾಯಗೊಂಡಿದ್ದಾರೆ ಮತ್ತು 2 ಲಕ್ಷ 80 ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಕೀನ್ಯಾ ಪ್ರವಾಹ: ಭಾರತದಿಂದ 40 ಟನ್ ಔಷಧಿ ರವಾನೆ
ಕೀನ್ಯಾ ಪ್ರವಾಹ: ಭಾರತದಿಂದ 40 ಟನ್ ಔಷಧಿ ರವಾನೆ
Date: