ಉಡುಪಿ, ಮೇ 31: ಜಿಲ್ಲೆಯ ಪೆರ್ಡೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿಗೆ ಎಲೆಕ್ಟ್ರಿಷಿಯನ್, ಎಂ.ಆರ್.ಎ.ಸಿ, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ಇಂಡಸ್ಟ್ರಿಯಲ್ ರೋಬೋಟಿಕ್ಸ್ ಅ್ಯಂಡ್ ಡಿಜಿಟಲ್ ಮ್ಯಾನ್ಯುಫ್ಯಾಕ್ಚರಿಂಗ್ ಟೆಕ್ನಿಷಿಯನ್, ಬೇಸಿಕ್ ಡಿಸೈನರ್ ಅ್ಯಂಡ್ ವರ್ಚುವಲ್ ವೆರಿಫಯರ್ (ಮೆಕ್ಯಾನಿಕಲ್), ಅಡ್ವಾನ್ಸಡ್ ಸಿ.ಎನ್.ಸಿ ಮೆಷಿನಿಂಗ್, ರ‍್ಟಿಸನ್ ಯೂಸಿಂಗ್ ಅಡ್ವಾನ್ಸಡ್ ಟೂಲ್ ಮತ್ತು ಮ್ಯಾನ್ಯುಫ್ಯಾಕ್ಚರಿಂಗ್ ಪ್ರೋಸೆಸ್ ಕಂಟ್ರೋಲ್ ಅ್ಯಂಡ್ ಆಟೋಮೇಷನ್ ಕೋರ್ಸ್ಗಳ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜೂನ್ 9 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ http://www.cite.karnataka.gov.in ಅಥವಾ ಸಂಸ್ಥೆಯ ಸಿಬ್ಬಂದಿಗಳಾದ ಕೃಷ್ಣ ಎಸ್ ಮೊ.ನಂ: 9449069144 ಹಾಗೂ ಸುರೇಶ್ ಜಿ.ಎಸ್ ಮೊ.ನಂ: 9964534829 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.