ಉಡುಪಿ: ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳು ಹಾಗೂ ಪ್ರಾಚಿ ಉಡುಪಿ ಸಹಯೋಗದಲ್ಲಿ ಡಿಸೆಂಬರ್ 19 ಮತ್ತು 20 ರಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಆವರಣದಲ್ಲಿ ಎರಡು ದಿನಗಳ ಕಾಲ ರಾಷ್ಟ್ರೀಯ ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಮಾರಾಟ ನಡೆಯಲಿದೆ.
ಗೊಂಡ್ ಬುಡಕಟ್ಟು ಜನಾಂಗದ ಬಸ್ತಾರ ಆರ್ಟ್, ಮಧ್ಯಪ್ರದೇಶದ ಜಾನಪದ ಕಲೆ, ಚನ್ನಪಟ್ಟಣದ ಗೊಂಬೆಗಳು, ಕಿನ್ನಾಳದ ಗೊಂಬೆ ಟೆರಾಕೋಟಾ, ವಸ್ತುಗಳು ,ಇಳ್ಕಲ್ ಸೀರೆ, ಉಡುಪಿ ಸೀರೆ, ಬಿಹಾರದ ಮಧುಬನಿ ಚಿತ್ರಕಲೆ, ಮಂಜೂಸಾ ಆರ್ಟ್, ಕರ್ನಾಟಕ ಕರಾವಳಿಯ ಅನೇಕ ಕಲುಕಸುಬು, ಬುಡಕಟ್ಟು ಬಾಳೆ ನಾರಿನ ಉತ್ಪನ್ನಗಳು ಜನಾಂಗಗಳು ಇಂದಿಗೂ ತಯಾರಿಸಿ ಬಳಸುವ ಅನೇಕ ಉತ್ಪನ್ನಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಡಿಸೆಂಬರ್ 19 ಸೋಮವಾರದಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಕ್ರಾಫ್ಟ್ ಕೌನ್ಸಿಲ್ ನ ಜೊತೆ ಕಾರ್ಯದರ್ಶಿ ಎನ್. ಶಶಿಧರ್ ಉದ್ಘಾಟಿಸಲಿದ್ದಾರೆ.
ಪೂರ್ಣಪ್ರಜ್ಞ ಕಾಲೇಜು ಆಡಳಿತ ಸಮಿತಿಯ ಕಾರ್ಯದರ್ಶಿ ಡಾ. ಚಂದ್ರಶೇಖರ್, ಉಡುಪಿಯ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಡಿಸೆಂಬರ್ 20ರಂದು ಬೆಳಿಗ್ಗೆ 10 ರಿಂದ ರಾತ್ರಿ 7ರ ವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.