ಉಡುಪಿ: ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಸೇನೆಯಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆನ್‌ಲೈನ್ ಪರೀಕ್ಷೆಗೆ ಪೂರ್ವ ನೋಂದಣಿ ಪ್ರಕ್ರಿಯೆಗೆ ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ http://agnipathvayu.cdac.in ಮೂಲಕ ನೋಂದಾಯಿಸಲು ನವೆಂಬರ್ 23 ಕೊನೆಯ ದಿನ.
2002 ಜೂನ್ 27 ರಿಂದ 25 ರ ಡಿಸೆಂಬರ್ 27 ರ ನಡುವೆ ಜನಿಸಿರುವ, ಪಿ.ಯು.ಸಿಯಲ್ಲಿ (ಕಲಾ, ಕಲೆ, ವಾಣಿಜ್ಯ, ವಿಜ್ಞಾನ, ಮತ್ತು ಡಿಪ್ಲೋಮಾ ಯಾವುದೇ ವಿಷಯಗಳಲ್ಲಿ) ಕನಿಷ್ಠ ಶೇ. 50% ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇ.50% ಅಂಕಗಳೊಂದಿಗೆ ಉತ್ತೀರ್ಣರಾದ ಅವಿವಾಹಿತ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ :9945856670, 8197440155 ಮತ್ತು 8105618291 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಯಮ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.