ಮಂಗಳೂರು: ಮಂಜೇಶ್ವರ ಗೋವಿಂದ ಪೈ ವೃತ್ತದಿಂದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನ ವರೆಗಿನ ರಸ್ತೆಯಲ್ಲಿ ಅಳವಡಿಸಲಾದ ಅಲಂಕಾರಿಕ ವಿದ್ಯುತ್ ದೀಪಗಳನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು.
ಮಂಗಳೂರು ನಗರದೆಲ್ಲೆಡೆ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. 24×7 ಕುಡಿಯುವ ನೀರು ಪೂರೈಸುವ ಜಲಸಿರಿ ಯೋಜನೆ, ಮನೆ ಮನೆಗೂ ಗ್ಯಾಸ್ ಸಂಪರ್ಕ ಒದಗಿಸುವ ಯೋಜನೆ, ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಕ್ರೀಡಾ ಸಂಕೀರ್ಣ, ಅಂತರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಯೋಜನೆಗಳು ನಡೆಯುತ್ತಿದೆ. ಮುಂದಿನ ಕೆಲ ವರ್ಷಗಳಲ್ಲಿ ಮಂಗಳೂರು ನಗರವು ಅಭಿವೃದ್ಧಿಶೀಲ ನಗರವಾಗಿ ರೂಪುಗೊಳ್ಳುತ್ತದೆ ಎಂದು ಶಾಸಕ ಕಾಮತ್ ಹೇಳಿದರು.
ಮಂಜೇಶ್ವರ ಗೋವಿಂದ ಪೈ ಸರ್ಕಲ್ ನಿಂದ ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿ ಸಾಧಿಸಿದೆ. ಸ್ಮಾರ್ಟ್ ರೋಡ್ ಪರಿಕಲ್ಪನೆಯಡಿ ದೇವಸ್ಥಾನದ ಪರಿಸರದ ರಸ್ತೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು ಉತ್ತಮ ರಸ್ತೆ ಹಾಗೂ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ ಎಂದು ಶಾಸಕ ಕಾಮತ್ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ನಿಕಟಪೂರ್ವ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮತಿಯ ಅಧ್ಯಕ್ಷರಾದ ಕಿಶೋರ್ ಕೊಟ್ಟಾರಿ, ಶಕಿಲಾ ಕಾವಾ, ನಯನಾ ಕೋಟ್ಯಾನ್, ಕಾರ್ಪೋರೇಟರ್ ಜಯಶ್ರೀ ಕುಡ್ವ, ಸುಧೀರ್ ಶೆಟ್ಟಿ ಕಣ್ಣೂರು, ಲೀಲಾವತಿ ಪ್ರಕಾಶ್, ಸಂಧ್ಯಾ ಮೋಹನ್ ಆಚಾರ್, ಸಂದೀಪ್ ಗರೋಡಿ, ರೇವತಿ ಶ್ಯಾಮ್ ಸುಂದರ್, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವರದರಾಯ ನಾಗ್ವೇಕರ್, ಗೋಪಿಚಂದ್ ಶೇಟ್, ವಿನಾಯಕ ಶೇಟ್, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಹೆಗ್ಡೆ, ಶ್ರೀನಿವಾಸ್ ಶೇಟ್, ರೂಪೇಶ್ ಶೇಟ್, ರಾಜೇಂದ್ರ ಕುಮಾರ್, ನಿಲೇಶ್ ಕಾಮತ್, ಶರತ್ ಶೆಟ್ಟಿ, ದಿನಕರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಅಕ್ಷತ್ ಕಾಮತ್, ಶ್ರೀಕಾಂತ್ ಶೆಣೈ, ಗೋಪಾಲ್ ಶೇಟ್, ಕೆನರಾ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಗುರುದತ್ ಕಾಮತ್, ಪ್ರಶಾಂತ್ ಭಟ್, ದಿನೇಶ್ ಭಟ್, ಸ್ಮಾರ್ಟ್ ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.