ಕಾರ್ಕಳ ಉತ್ಸವದ ಆಹಾರೋತ್ಸವವು ಹಲವು ಕಾರಣಕ್ಕೆ ಭಾರೀ ಪ್ರಸಿದ್ದಿಯನ್ನು ಪಡೆಯುತ್ತಿದೆ. ಅದರಲ್ಲಿ ಒಂದು ಕಾರಣ ಕಾರ್ಕಳದ್ದೆ ಹಲವು ಬ್ರಾಂಡ್ ಉತ್ಪನ್ನಗಳು ಹುಟ್ಟಿ ಬಂದಿರುವುದು. ಅದರಲ್ಲಿ ಒಂದು ಅರ್ಕಾ ಕಿರಣ್ ಬ್ರಾಂಡ್!
ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ರೈತರು ಸ್ಫೂರ್ತಿ ಪಡೆದು “ಆರ್ಕಾ ಕಿರಣ” ಎಂಬ ಪೇರಳೆಯನ್ನು ಬೆಳೆದರು. ಅಪರೂಪದಲ್ಲಿ ಅಪರೂಪದ ಈ ತಳಿಯಲ್ಲಿ ಅತೀ ಹೆಚ್ಚು ವಿಟಮಿನ್, ಫ್ರಕ್ಟೋಸ್, ನಾರಿನ ಅಂಶ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ ಎಂದು ಪ್ರೂವ್ ಆಗಿದೆ. ರುಚಿ ಅದ್ಭುತ ಆಗಿದೆ.
ಉತ್ಪನ್ನ ಏನೋ ಅದ್ಭುತವಾಗಿದೆ. ಆದರೆ ಕೊರೋನಾ ಕಾರಣಕ್ಕೆ ಮಾರ್ಕೆಟ್ ತೊಂದರೆ ಆಯ್ತು. ಬೆಳೆಯನ್ನು ಬೆಳೆದ ರೈತರು ಹತಾಶರಾದರು. ಆಗ ನನ್ನ ಅತ್ಯಂತ ಆತ್ಮೀಯ ಸ್ನೇಹಿತ ದೀಪಕ್ ಕಾಮತ್ ಅವರು ಇದನ್ನು ಬ್ರಾಂಡ್ ಮಾಡಿ ಮಾರ್ಕೆಟ್ ಮಾಡುವ ಯೋಚನೆ ಮಾಡುತ್ತಾರೆ.
ರೈತರಿಂದ ಪೇರಳೆ ಖರೀದಿ ಮಾಡಿ ಅದರ ತಿರುಳು ಮತ್ತು ಜ್ಯೂಸ್ ತೆಗೆದು ಅದನ್ನು ಐಸ್ ಕ್ರೀಮ್, ಐಸ್ ಕ್ಯಾಂಡಿ, ಹಲ್ವಾ, ಜ್ಯೂಸ್ ಆಗಿ ಪರಿವರ್ತನೆ ಮಾಡಿ ಮಾರ್ಕೆಟ್ ಮಾಡಲು ಇಳಿದಿದ್ದಾರೆ. ಐಸ್ ಕ್ರೀಂ, ಐಸ್ ಕ್ಯಾಂಡಿ, ಜ್ಯೂಸ್ ಇತ್ಯಾದಿ ಮಾಡುವಾಗ ಅದರ ಪೋಷಕಾಂಶಗಳು ಮತ್ತು ನಾರಿನ ಪದಾರ್ಥ ಉಳಿಯುವ ಹಾಗೆ ನೋಡಿಕೊಂಡಿದ್ದಾರೆ. ರಾಸಾಯನಿಕ, ಸಕ್ಕರೆ ಇತ್ಯಾದಿಗಳು ಸೇರದ ಹಾಗೆ ನೋಡಿಕೊಂಡಿದ್ದಾರೆ. ಇದೀಗ “ಅರ್ಕಾ ಕಿರಣ್” ಬ್ರಾಂಡ್ ಪೇರಳೆಯ ಉತ್ಪನ್ನಗಳು ಕಾರ್ಕಳ ಉತ್ಸವದ ಮೆಗಾ ಆಹಾರೋತ್ಸವದ ಒಂದು ಮಳಿಗೆಯಲ್ಲಿ ಲಭ್ಯವಿವೆ.
ಸೇವಾ ಮನೋಭಾವದ ದೀಪಕ್ ಕಾಮತ್ ಅವರಿಗೆ ಲಾಭ ಮಾಡುವ ಆಸೆ ಇಲ್ಲ. ರೈತರ ಬೆಂಬಲಕ್ಕೆ ನಿಲ್ಲಬೇಕು ಅನ್ನುವ ಕಾಳಜಿ ಮಾತ್ರ ಅವರ ಮಾತಲ್ಲಿ ಎದ್ದುಕಾಣುತ್ತದೆ. ಅವರ ಆಶಯವನ್ನು ಬೆಂಬಲಿಸಲು ಕಾರ್ಕಳ ಉತ್ಸವದ ಆಹಾರ ಮಳಿಗೆಯಲ್ಲಿ ಇರುವ ಅವರ “ಧೃತಿ ಜ್ಯೂಸ್ ಸೆಂಟರಿಗೆ” ಒಮ್ಮೆ ಆದರೂ ಭೇಟಿ ನೀಡಿ ಅವರನ್ನು ಬೆಂಬಲಿಸಿ ಮತ್ತು ಕಾರ್ಕಳದ್ದೆ ಆದ ಬ್ರಾಂಡನ ನೆರವಿಗೆ ನಿಲ್ಲಿ.
ಅವರು ನಿಮ್ಮ ನಿಮ್ಮ ಮನೆಯ ಮದುವೆ, ಮೆಹೆಂದಿ, ಗೃಹ ಪ್ರವೇಶ, ಮುಂಜಿ, ಬರ್ತಡೇ, ಆನಿವರ್ಸರಿ ಮೊದಲಾದ ಕಾರ್ಯಕ್ರಮಗಳಿಗೆ ಈ ಉತ್ಪನ್ನಗಳನ್ನು ತಲುಪಿಸಿ ಉತ್ತಮ ಸೇವೆಯನ್ನು ಕೊಡಲು ಸಿದ್ಧರಾಗಿ ನಿಂತಿದ್ದಾರೆ. ಪೇರಳೆಯ ಸ್ವಾದ ನಿಮಗೆ ಖಂಡಿತ ಇಷ್ಟವಾಗುತ್ತದೆ. ಅವರ ಮೊಬೈಲ್ ನಂಬರ್ – 9844181463.
–ರಾಜೇಂದ್ರ ಭಟ್ ಕೆ, (ಶಿಕ್ಷಕರು ಮತ್ತು ಜೇಸಿಐ ರಾಷ್ಟ್ರಮಟ್ಟದ ತರಬೇತುದಾರರು)