ಕೋಟ: ಮಹಿಳಾ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಇದರ ಮಹಾಸಭೆ ಗುರುನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ನಡೆಯಿತು. ಮುಖ್ಯ ಅಭ್ಯಾಗತರಾಗಿ ಬಿ.ಎಸ್.ಎನ್.ಎಲ್ ನಿವೃತ್ತ ಅಧಿಕಾರಿ ರಶ್ಮಿ ಕಾರಂತ ಮಾತನಾಡಿ, ನಮ್ಮ ಸನಾತನ ಧರ್ಮ ಹಾಗೂ ಸಂಸ್ಕೃತಿಗಳನ್ನು ಉಳಿಸುವ ಕೆಲಸ ಮಹಿಳೆಯರಿಂದ ಸಾಧ್ಯ ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ.ಎಸ್.ಕಾರಂತ, ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ಶುಭ ಹಾರೈಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ ಸಿ
ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಶ್ರೀಮತಿ ಮಯ್ಯ ಸ್ವಾಗತಿಸಿ, ಕಾರ್ಯದರ್ಶಿ ಲತಾ ಹೊಳ್ಳ ವರದಿ ವಾಚಿಸಿದರು. ಖಜಾಂಚಿ ಗೀತಾ ಅಧಿಕಾರಿ ಲೆಕ್ಕ ಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಅಶಕ್ತ ಮಹಿಳೆಯರಿಗೆ ನೆರವು, ಮತ್ತು ವಿದ್ಯಾರ್ಥಿಗಳಿಗೆ
ಪ್ರತಿಭಾ ಪುರಸ್ಕಾರ ನೀಡಲಾಯಿತು.
ನಾಗರತ್ನ ಹೇರ್ಳೆ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಭಾರತಿ ಪ್ರಕಾಶ್ ಹೇರ್ಳೆ ಸದಸ್ಯರ ವಿವರಪಟ್ಟಿ ವಾಚಿಸಿದರು. ಜೊತೆ ಕಾರ್ಯದರ್ಶಿ ವಸುಧಾ ಉಡುಪ ವಂದನಾರ್ಪಣೆಗೈದರು.
ಶುಭ ಭಾಗವತ ಮತ್ತು ತಂಡ ಹಾಗೂ ಅಮೃತ ಉಪಾಧ್ಯ ಮತ್ತು ತಂಡದವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಪೂರ್ಣಿಮಾ ಅಧಿಕಾರಿ ಕಾರ್ಯಕ್ರಮ ನಿರೂಪಿಸಿದರು.