ಕೋಟ: ಪ್ರಪ್ರಥಮ ಯಕ್ಷಗಾನವನ್ನು ವಿದೇಶಕೊಯ್ದ ದಾಖಲೆಯ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಲ್ಲೊಬ್ಬರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ರಂಗನಟ, ಸಾಹಿತಿ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ 2022 ರ ಪ್ರಶಸ್ತಿಯನ್ನು ಯಕ್ಷಗಾನದ ನಡುತಿಟ್ಟಿನ ಹಾರಾಡಿ ಶೈಲಿಯ ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗರಿಗೆ ಪ್ರದಾನ ಮಾಡಲಾಗುವುದೆಂದು ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಕಾರ್ಯಾಧ್ಯಕ್ಷ ಮಹೇಶ ಉಡುಪ ಮಂದರ್ತಿ, ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆಯವರನ್ನೊಳಗೊಂ ಸಮಿತಿ ನಿರ್ಧರಿಸಿದೆ.
ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿ, ಅಮೃತೇಶ್ವರಿ, ಸಾಲಿಗ್ರಾಮ, ಹಾಲಾಡಿ, ಸೌಕೂರು ಮೇಳಗಳಲ್ಲಿ ಕರ್ಣ, ಜಾಂಬವ, ಅರ್ಜುನ, ಶಲ್ಯ, ರಾವಣ, ಕಂಸ, ಶೂರಸೇನ, ಈಶ್ವರ, ಕಾಲನೇಮಿ, ಶುಂಭ, ಮಧುಕೈಟಭ, ಅತಿಕಾಯ ಮೊದಲಾದ
ಪಾತ್ರಗಳನ್ನು ನಿರ್ವಹಿಸಿದ ವಿಶ್ವನಾಥರು, ಅಟ್ಟೆ ಮುಂಡಾಸು ಕಟ್ಟುವುದರಲ್ಲಿ ದಾಖಲೆ ನಿರ್ಮಿಸಿದವರು.
ಹಳೆಯ ಹಾಗೂ ಹೊಸ ಪ್ರಸಂಗಗಳೆರಡರಲ್ಲು ಎತ್ತರದ ಶರೀರ ಮತ್ತು ಶಾರೀರದ ಕೋಡಿಯವರು ಹಿತ ಮಿತ ಮಾತು, ಗತ್ತಿನ ಕುಣಿತಗಳಿಂದ ಆಟ-ಜೋಡಾಟದ ರಂಗಸ್ಥಳದಲ್ಲಿ ವಿಜೃಂಭಿಸಿದವರು. ಮುಂಬರುವ 2022 ರ ಫೆಬ್ರುವರಿ 2 ರಂದು ಕೋಟದ ಪಟೇಲರ ಮನೆಯಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಕೋಡಿಯವರಿಗೆ ಉಡುಪ ಪ್ರಶಸ್ತಿಯನ್ನಿತ್ತು ಗೌರವಿಸಲಾಗುವುದೆಂದು ಸಾಲಿಗ್ರಾಮ ಮಕ್ಕಳ ಮೇಳ ಟ್ರಸ್ಟ್ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಡಿ ವಿಶ್ವನಾಥ ಗಾಣಿಗರಿಗೆ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಮುಂಬರುವ 2022 ರ ಫೆಬ್ರುವರಿ 2 ರಂದು ಕೋಟದ ಪಟೇಲರ ಮನೆಯಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಕೋಡಿಯವರಿಗೆ ಉಡುಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.