ಹೂಡೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ತೋನ್ಸೆ ಪಂಚಾಯತ್ ಹಾಗೂ ನಿರ್ಮಲ ತೋನ್ಸೆ (ರಿ) ಸರಕಾರೇತರ ಪರಿಸರ ಪ್ರೇಮಿ ಸಂಸ್ಥೆ ತೋನ್ಸೆ ಇವರ ನೇತೃತ್ವದಲ್ಲಿ, ಸ್ವಚ್ಚ ಭಾರತ್ ಫ್ರೆಂಡ್ಸ್, ಜಮಾತೆ ಇಸ್ಲಾಮಿ ಹೂಡೆ, ಎಚ್. ಆರ್. ಎಸ್. ಹೂಡೆ, ಎಸ್. ಎಲ್. ಆರ್. ಎಮ್ ಘಟಕ ಪಡುತೋನ್ಸೆ ಮತ್ತು ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಅಂಗವಾಗಿ ಹೂಡೆ ಕಡಲ ತೀರ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.
ನಿರ್ಮಲ ತೋನ್ಸೆಯ ಅಧ್ಯಕ್ಷರಾದ ವೆಂಕಟೇಶ್ ಜಿ.ಕುಂದರ್ ಪ್ರಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ನ ಕಾರ್ಯದರ್ಶಿ ದಿನಕರ್ ಬೆಂಗ್ರೆ ಸ್ವಾಗತಿಸಿ, ಸ್ವಚ್ಚ ಭಾರತ್ ಫ್ರೆಂಡ್ಸ್ ಸದಸ್ಯ ಗಣೇಶ್ ಪ್ರಸಾದ್ ವಂದಿಸಿದರು.
ತೋನ್ಸೆ ಪಂಚಾಯತ್ ಸದಸ್ಯರು, ಅಭಿವೃದ್ಧಿ ಅಧಕಾರಿಗಳು, ಸಿಬ್ಬಂದಿ ವರ್ಗ, ಎಚ್. ಆರ್. ಎಸ್ ನ ಯಾಸಿನ್ ಕೋಡಿಬೆಂಗ್ರೆ, ಜಮಾತೆ ಇಸ್ಲಾಮಿ ಅಧ್ಯಕ್ಷರು, ಸದಸ್ಯರು, ನಿರ್ಮಲ ತೋನ್ಸೆಯ ಉಪಾಧ್ಯಕ್ಷ ಕೆ. ಮೊಯಿದಿನ್ ಸಾಹೇಬ್, ಕಾರ್ಯದರ್ಶಿ ಎಮ್. ಸಯಿದ್ ಖಾನ್, ಇದ್ರಿಸ್ ಹೂಡೆ, ಅರುಣ್ ಫೆರ್ನಾಂಡಿಸ್, ರಾಘವೇಂದ್ರ ಪ್ರಭು, ಪಂಚಾಯತ್ ಸದಸ್ಯರಾದ ಪುರಂದರ ಕುಂದರ್, ವಿಜಯ, ಫೌಜಿಯಾ ಪರ್ವೀನ್, ಎಸ್. ಎಲ್. ಆರ್. ಎಮ್ ನ ಆಶಾ, ಪದ್ಮಾ, ಮುಂತಾದವರು ಉಪಸ್ಥಿತರಿದ್ದರು.