ಮಣಿಪುರ: ಮರ್ಣೆ ಕೊಡಂಗಳದ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೊಡಂಗಳ ಸೇತುವೆಯಿಂದ ಮರ್ಣೆ ಎಸ್.ಎಲ್.ಆರ್.ಎಮ್ ಘಟಕದವರೆಗೆ ಸುಮಾರು 7 ಕಿ. ಮೀ. ವ್ಯಾಪ್ತಿಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಯುವ ಉದ್ಯಮಿ ಶ್ರೀಶ ನಾಯಕ್ ಚಾಲನೆ ನೀಡಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಮರ್ಣೆಗೆ ಸ್ವಚ್ಛತೆಗಾಗಿ 5 ಸಾವಿರದ ಚೆಕ್ ನೀಡಲಾಯಿತು. ಕೊಡಂಗಳ ಕರ್ವಾಲು ಶಾಲೆಗೂ ತಲಾ ರೂ 5 ಸಾವಿರದ ಚೆಕ್ ಹಸ್ತಾಂತರಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷರಾದ ರವೀಂದ್ರ ನಾಯಕ್ ಹೇಳಿದರು.
ಸ್ಥಳೀಯ ಪಂಚಾಯತ್ ಸದಸ್ಯರಾದ ಪ್ರಜ್ವಲ್ ಹೆಗ್ಡೆ ಮರ್ಣೆ, ವಾಣಿ ನಾಯಕ್ ಮರ್ಣೆ, ಪದ್ಮನಾಭ ನಾಯಕ್ ಕೊಡಂಗಳ, ರೈತ ಮೋರ್ಚಾದ ಸದಸ್ಯರಾದ ಪದ್ಮನಾಭ ಹೆಗ್ಡೆ, ಸ್ಥಳೀಯ ಸಂಘಗಳಾದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಮರ್ಣೆ-ಕನರಾಡಿ-ಕೊಡಂಗಳ-ಕರ್ವಾಲು, ಶ್ರೀ ರಾಮ ಭಜನಾ ಮಂಡಳಿ (ರಿ.) ಕೊಡಂಗಳ, ಶ್ರೀ ಅಶ್ವತ್ಥನಾರಾಯಣ ಭಜನಾ ಮಂಡಳಿ ಕನರಾಡಿ, ಭಕ್ತವೃಂದ ಭಜನಾ ಮಂಡಳಿ ಮರ್ಣೆ, ಯುವ ಸಂಘಟನೆ ಕೊಡಂಗಳ, ಯೂತ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಸೋಸಿಯೇಷನ್ (ರಿ.) ಮರ್ಣೆ, ಮರ್ಣೆ ಫ್ರೆಂಡ್ಸ್ ಮರ್ಣೆ, ಬಬ್ಬರ್ಯ ಫ್ರೆಂಡ್ಸ್ ಮರ್ಣೆ, ಮರ್ಣೆ ಕೊಡಂಗಳ ಕನರಾಡಿ ವ್ಯಾಪ್ತಿಯ ಸಂಜೀವಿನಿ ಒಕ್ಕೂಟ (ಸ್ತ್ರೀ ಶಕ್ತಿ), ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವೋದಯ ಗುಂಪುಗಳು ಮುಂತಾದ ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸ್ಥಳೀಯರು ಉಪಸ್ಥಿತರಿದ್ದರು.