Friday, October 4, 2024
Friday, October 4, 2024

ವಿಶು ಶೆಟ್ಟಿ ನೇತೃತ್ವದ ಐದು ತಿಂಗಳ ಅನ್ನದಾನ ಸಮಾರೋಪ

ವಿಶು ಶೆಟ್ಟಿ ನೇತೃತ್ವದ ಐದು ತಿಂಗಳ ಅನ್ನದಾನ ಸಮಾರೋಪ

Date:

ಉಡುಪಿ: ಕೊರೊನಾ 2ನೇ ಲಾಕ್ ಡೌನ್ ಪ್ರಾರಂಭದಿಂದ ಅಸಹಾಯಕ ವೃದ್ಧರು, ವಿಕಲಚೇತನರು, ಮಾನಸಿಕ ರೋಗಿಗಳಿಗೆ ಹಾಗೂ ಹಸಿದವರ ಹಸಿವು ನೀಗಿಸಿದ ವಿಶು ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಕೃಷ್ಣ ಅಮೀನ್ ಮಧ್ವನಗರ ಹೇಳಿದರು. ಸೆಪ್ಟೆಂಬರ್ 23 ತಾರೀಕಿನಿಂದ ಕೃಷ್ಣ ಮಠದಲ್ಲಿ ಅನ್ನ ಪ್ರಸಾದ ಪ್ರಾರಂಭವಾದ ಹಿನ್ನೆಲೆಯಲ್ಲಿ ವಿಶು ಶೆಟ್ಟಿ ಅಂಬಲಪಾಡಿ ನೇತೃತ್ವದಲ್ಲಿ ಕಳೆದ ಐದು ತಿಂಗಳಿನಿಂದ ನಡೆಯುತ್ತಿದ್ದ ಅನ್ನದಾನ ಕಾರ್ಯಕ್ರಮ ಸಮಾರೋಪಗೊಳಿಸಲಾಯಿತು.

ಏಪ್ರಿಲ್ 24ರಂದು ಲಾಕ್ ಡೌನ್ ಪ್ರಾರಂಭವಾದ ದಿನದಿಂದ ಪ್ರತಿದಿನ 500ಕ್ಕೂ ಹೆಚ್ಚು ಜನರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ವಿಶು ಶೆಟ್ಟಿಯವರು ಕಲ್ಪಿಸಿದ್ದರು. ಲಾಕ್ ಡೌನ್ ಮುಗಿದ ನಂತರ ಧಾರ್ಮಿಕ ಕೇಂದ್ರದಲ್ಲಿ ಅನ್ನ ಪ್ರಸಾದ ವಿತರಣೆಯು, ಕೊರೋನ ನಿಯಮಾವಳಿಯ ಹಿನ್ನಲೆಯಲ್ಲಿ ಆಗದ ಕಾರಣ ತೀರಾ ವೃದ್ದರು, ರೋಗಿಗಳು, ಅಂಗವಿಕಲರು, ಮಾನಸಿಕ ಅಸ್ವಸ್ಥರು ಊಟವಿಲ್ಲದೆ ಕಂಗಾಲಾಗಿ ಉಪವಾಸವಿರುವ ಪರಿಸ್ಥಿತಿ ಅರಿತು ಪ್ರತಿದಿನ ರಾಜಾಂಗಣ ಪಾರ್ಕಿಂಗ್ ಪರಿಸರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿಯ ಊಟ ನೀಡುವುದನ್ನು ನಿರಂತರವಾಗಿ ವಿಶು ಶೆಟ್ಟಿ ಮುಂದುವರೆಸಿದ್ದರು. ಇದೀಗ ಅನ್ನ ಪ್ರಸಾದ ವಿತರಣೆ ಪ್ರಾರಂಭವಾಗಿರುವುದರಿಂದ ಸೆ. 23ರಂದು ಊಟ ನೀಡಿ ಊಟ ಪಡೆದವರಿಗೆ ಉತ್ತಮ ರೀತಿಯಲ್ಲಿ ಸಮಾಜದಲ್ಲಿ ಬದುಕಿ ಆರೋಗ್ಯವಾಗಿರಲು ಶ್ರಮಿಸೋಣ ಎಂದು ಕಿವಿಮಾತು ಹೇಳಿದರು.

ರಾತ್ರಿಯ ಊಟ ವಿತರಣೆಗೆ ಕೃಷ್ಣ ಅಮೀನ್ ಮಧ್ವನಗರ ಹಾಗೂ ಗೋವಾ ಬೇಕರಿಯ ಹೆರಾಲ್ಡ್ ನಿರಂತರ ಸಹಕರಿಸಿದರು. ಸುಂದರ್ ಪೂಜಾರಿ ಮಧ್ವನಗರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನೇತ್ರಶಾಸ್ತ್ರದ ಅಗತ್ಯತೆಗಳು – ಭಾರತೀಯ ಸಾಮರ್ಥ್ಯ-ಆಧಾರಿತ ವೈದ್ಯಕೀಯ ಪಠ್ಯಕ್ರಮದ ಪ್ರಕಾರ ಪಠ್ಯಪುಸ್ತಕ ಬಿಡುಗಡೆ

ಮಣಿಪಾಲ, ಅ.4: ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ), ನೇತ್ರಶಾಸ್ತ್ರದ ಅಗತ್ಯತೆಗಳು,...

ಸಮಾಜಮುಖಿ ಕಾರ್ಯಗಳಿಗೆ ಸ್ಪಂದಿಸುವುದೇ ಶಿಕ್ಷಣದ ಮೂಲ ಉದ್ದೇಶ: ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ, ಅ.4: ನಾಲ್ಕು ಗೋಡೆಗಳ ನಡುವೆ ಕಲಿಯುವ ಪಾಠ ಮಾತ್ರವೇ ಶಿಕ್ಷಣವಲ್ಲ....

ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ: ಸಾರ್ವಜನಿಕರು ಮುಂಜಾಗ್ರತೆ ವಹಿಸಿ

ಉಡುಪಿ, ಅ.4: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ...
error: Content is protected !!