ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಪದವು ಪಶ್ಚಿಮ ವಾರ್ಡಿನ ಶ್ರೀನಿವಾಸ ಮಲ್ಯ ನಗರದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನಡೆಯಿತು. ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಶ್ರೀನಿವಾಸ್ ಮಲ್ಯ ನಗರದ ಬಹುಕಾಲದ ಬೇಡಿಕೆಯಾಗಿರುವ ರಸ್ತೆ ಹಾಗೂ ಸೇತುವೆ ನಿರ್ಮಾಣದ ಕಾಮಗಾರಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ಬಿಡುಗಡೆಗೊಳಿಸಲಾಗಿದೆ. ಈ ಸೇತುವೆ ನಿರ್ಮಾಣದಿಂದ ನೇರವಾಗಿ ಬಡಾವಣೆಯ ಸಂಪರ್ಕ ರಸ್ತೆ ನಿರ್ಮಾಣವಾದಂತಾಗುತ್ತದೆ. ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ ಎಂದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್ ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರದ ಲೇಔಟ್ ಬಳಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಇಲಾಖೆಯಿಂದ ಅನುದಾನ ಬಿಡುಗಡೆಗೊಳಿಸಲಾಗಿದೆ. ಪರಿಸರದ ನಿವಾಸಿಗಳ ಬಹುಕಾಲದ ಬೇಡಿಕೆ ಈಡೇರಿಸಿದ ಸಂತೃಪ್ತಿ ಇದೆ ಎಂದರು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂದೀಪ್ ಗರೋಡಿ, ಲೀಲಾವತಿ ಪ್ರಕಾಶ್, ಪಾಲಿಕೆ ಸದಸ್ಯೆ ವನಿತಾ ಪ್ರಸಾದ್, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಅಜಯ್ ಕುಲಶೇಖರ, ವಿಜಯ ಶೆಣೈ, ಪ್ರಸಾದ್ ಆಚಾರ್ರ, ವಸಂತ್ ಜೆ ಪೂಜಾರಿ, ಲತಾ, ಪದ್ಮನಾಭ, ಶ್ರೀನಿವಾಸ್ ಮಲ್ಯ ನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಾಮನ್ ಬಿ ಮೈಂದನ್, ಉಪಾಧ್ಯಕ್ಷ ಹರಿಕೃಷ್ಣ ನಾಯಕ್, ಕಾರ್ಯದರ್ಶಿ ಓಸ್ಮುಂಡ್ ಫರ್ನಾಂಡೀಸ್, ಜೊತೆ ಕಾರ್ಯದರ್ಶಿ ರಘು ಆಚಾರ್ಯ, ಕೋಶಾಧಿಕಾರಿ ಎಂ ಗೋಪಾಲ ಸಾಮಂತ್, ಗೌರವ ಸಲಹೆಗಾರ ಅನಿಲ್ ವಾಸ್, ಹಿಲ್ಡಾ ಮಾಡ್ತಾ, ನಾರಾಯಣ, ಸುಧಾಕರ ಜಂಬಗಿ, ಕೆ. ಸತ್ಯ ನಾರಾಯಣ, ರಾಮ್ ಕುಮಾರ್ ಎಂ, ಆನಂದ್, ಶಿವರಾಮ್ ನಾಯಕ್, ಜಯಪ್ಪ ಲಂಬಾಣಿ, ಮುಕೇಶ್, ಲೋಕಯ್ಯ ಗೌಡ, ಹರ್ಷವರ್ಧನ್, ಸುಭಾಷ್ ಚಂದ್ರ ನಾಯಕ್, ಗುರುದತ್ ನಾಯಕ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.