ಉಡುಪಿ: ಭಾರೀ ಪ್ರಯಾಣಿಕ ವಾಹನಗಳು ಪರವಾನಿಗೆ ರಹಿತವಾಗಿ ಹಾಗೂ ರಹದಾರಿ ನಿಯಮ ಉಲ್ಲಂಘನೆ ಮಾಡಿ ಸಂಚರಿಸುವ ಬಸ್ಸುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದೆಂದು ಈಗಾಗಲೇ ಮುನ್ನೆಚ್ಚರಿಕೆ ನೀಡಿಲಾಗಿದ್ದರೂ ಸಹ, ಕಾನೂನು ಉಲ್ಲಂಘನೆ ಮಾಡಿ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಅನ್ನು ಇಂದು ಮುಟ್ಟುಗೋಲು ಹಾಕಿಕೊಳ್ಳಲಾಯಿತು.
ಯಾವುದೇ ಪ್ರಯಾಣಿಕ ವಾಹನವು ರಹದಾರಿ ಉಲ್ಲಂಘಿಸಿ, ತೆರಿಗೆ ಪಾವತಿಸದೆ ಸಾರ್ವಜನಿಕರನ್ನು ಕೊಂಡ್ಯೊಯ್ಯದಂತೆ ಎಲ್ಲಾ ಬಸ್ ಮಾಲೀಕರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ ಗಂಗಾಧರ ಎಚ್ಚರಿಕೆ ನೀಡಿದ್ದಾರೆ.