Saturday, November 23, 2024
Saturday, November 23, 2024

ರೋಟರಿ ಉಡುಪಿ- ಜನರೇಟರ್ ಕೊಡುಗೆ

ರೋಟರಿ ಉಡುಪಿ- ಜನರೇಟರ್ ಕೊಡುಗೆ

Date:

ಶ್ರೀ ಕೃಷ್ಣ ಬಾಲನಿಕೇತನಕ್ಕೆ ಗುರುರಾಜ ಭಟ್ ಮತ್ತು ಶುಭಲಕ್ಷ್ಮಿ ದಂಪತಿಗಳ ಪುತ್ರ ಆನಂದ ಮತ್ತು ಪಲ್ಲವಿಯವರಿಂದ ಕೊಡಲ್ಪಟ್ಟ ಜನರೇಟರ್ ಮತ್ತು ಇತರ ಉಪಕರಣಗಳನ್ನು ರೋಟರಿ ಉಡುಪಿ ಮುಖಾಂತರ ಹಸ್ತಾಂತರ ಕಾರ್ಯಕ್ರಮವು ಬಾಲನಿಕೇತನದ ಅಧ್ಯಕ್ಷರಾದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು.

ಕೋಡುಗೆಯನ್ನು ಸ್ವೀಕರಿಸಿ ದಾನಿಗಳನ್ನು ಅಭಿನಂದಿಸಿದ ಪೇಜಾವರ ಶ್ರೀಗಳು, ರೋಟರಿಯ ಸಮುದಾಯ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು. ರೋಟರಿ ಉಡುಪಿಯ ಈ ವರ್ಷದ ಸಮುದಾಯ ಸೇವೆ ಕಾರ್ಯಕ್ರಮಗಳ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಪೇಜಾವರ ಶ್ರೀಗಳು ನೆರವೇರಿಸಿ ಶುಭ ಹಾರೈಸಿದರು. ಬಾಲನಿಕೇತನದ ವಠಾರದಲ್ಲಿ ಇದೇ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಗಿಡಗಳನ್ನು ನೆಟ್ಟರು.

ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ಉಪಾಧ್ಯಕ್ಷ ರಘುರಾಮ ಕೃಷ್ಣ ಬಲ್ಲಾಳ, ಸಹ ಕಾರ್ಯದರ್ಶಿ ಹೆರಾಲ್ಡ್ ಡಿಸೋಜ, ಉಡುಪಿ ವಲಯ ಕಾರ್ಯದರ್ಶಿ ನಾಗೇಶ್ ನಾಯಕ್, ಪ್ರದೇಶ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮತ್ತು ರಮೇಶ್, ಶ್ರೀ ಕೃಷ್ಣ ಬಾಲನಿಕೇತನದ ಉಪಾಧ್ಯಕ್ಷ ಪ್ರೊ. ಕಮಲಾಕ್ಷ, ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ರಘುರಾಮ ಆಚಾರ್ಯ, ರಾಮಚಂದ್ರ ಸನಿಲ್, ರಾಘವೇಂದ್ರ ರಾವ್, ಎಸ್ ವಿ ಭಟ್, ಗುರುರಾಜ ಭಟ್, ಸುಹಾನಿ ಕಾಮತ್, ರೋಟರಿ ಸದಸ್ಯರುಗಳಾದ ಲಕ್ಷ್ಮೀನಾರಾಯಣ, ರಾಧಿಕಾ ಲಕ್ಷ್ಮೀನಾರಾಯಣ, ದಿನೇಶ್ ಭಂಡಾರಿ, ವನಿತಾ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

ರೋಟರಿ ಉಡುಪಿ ಅಧ್ಯಕ್ಷ ಹೇಮಂತಕಾಂತ ಸ್ವಾಗತಿಸಿ, ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಜ್ಞಾನಸುಧಾ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಉಡುಪಿ, ನ.23: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಪ್ರಧಾನಮಂತ್ರಿ ಫಸಲ್ ಬಿಮಾ ಹಿಂಗಾರು ಮತ್ತು ಬೇಸಿಗೆ ಹಂಗಾಮು ಯೋಜನೆ

ಉಡುಪಿ, ನ.22: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು ಗ್ರಾಮ...

ಜಿಲ್ಲೆಯಲ್ಲಿ ಕೆ.ಎಫ್.ಡಿ ಪ್ರಕರಣಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ

ಉಡುಪಿ, ನ.22: ಕ್ಯಾಸನೂರು ಅರಣ್ಯ ರೋಗವು ಅಥವಾ ಮಂಗನ ಜ್ವರ ಕಾಯಿಲೆಯು...

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...
error: Content is protected !!