Wednesday, January 15, 2025
Wednesday, January 15, 2025

ವಿದ್ಯಾರ್ಥಿಗಳಿಗೆ ಲಸಿಕೆ ಕುರಿತು ಮಹತ್ವದ ಮಾಹಿತಿ

ವಿದ್ಯಾರ್ಥಿಗಳಿಗೆ ಲಸಿಕೆ ಕುರಿತು ಮಹತ್ವದ ಮಾಹಿತಿ

Date:

ಜಿಲ್ಲೆಯಲ್ಲಿ ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿ ಸರ್ಕಾರದ ಆದೇಶದನ್ವಯ 18 ರಿಂದ 44 ವರ್ಷ ವಯೋಮಾನದವರಲ್ಲಿ ಆದ್ಯತೆ ಗುಂಪುಗಳನ್ನು ಗುರುತಿಸಿ, ಕೋವಿಡ್ -19 ಲಸಿಕಾಕರಣವು ಸಮರೋಪಾದಿಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಮುಂದುವರೆದು ದಿನಾಂಕ: 23.06.2021 ರ ಸರ್ಕಾರದ ಆದೇಶ ಸಂಖ್ಯೆ: ಎನ್.ಹೆಚ್.ಎಂ / ಡಿಡಿ / ಐಎಂಎಂ/2021-22 ರಲ್ಲಿ ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿರುವುದರಿಂದ, ವಿದ್ಯಾರ್ಥಿಗಳಲ್ಲಿ ಆತ್ಮ ಸ್ದೈರ್ಯ ತುಂಬಲು ಕಾಲೇಜುಗಳು ಪ್ರಾರಂಭವಾಗುವ ಪೂರ್ವವಾಗಿ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕಾಕರಣ ನಡೆಸುವಂತೆ ತಿಳಿಸಲಾಗಿರುತ್ತದೆ.

ಆದರೆ ಉಡುಪಿ ಜಿಲ್ಲೆಯಲ್ಲಿ ವಾಸ್ತವ್ಯ ಹೊಂದಿ ಇತರ ಜಿಲ್ಲೆ / ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಾವು ವಾಸ್ತವ್ಯ ಹೊಂದಿರುವ ಉಡುಪಿ ಜಿಲ್ಲೆಯಲ್ಲಿಯೇ ಲಸಿಕಾಕರಣವನ್ನು ನಡೆಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಈ ಬಗ್ಗೆ ವಿವರಗಳನ್ನು ಸಂಗ್ರಹಿಸುವುದು ಅವಶ್ಯಕವಾಗಿದ್ದು, ಕೋವಿಡ್-19 ಲಸಿಕೆಯನ್ನು ಪಡೆಯಲಿಚ್ಚಿಸುವ ಉಡುಪಿ ಜಿಲ್ಲೆಯಲ್ಲಿ ವಾಸ್ತವ್ಯ ಹೊಂದಿ, ಅನ್ಯ ಜಿಲ್ಲೆ / ರಾಜ್ಯದಲ್ಲಿ ವ್ಯಾಸಂಗ ನಡೆಸುತ್ತಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಈ ಕೆಳಗೆ ತಿಳಿಸಿರುವ ಲಿಂಕ್ ನಲ್ಲಿ ಭರ್ತಿ ಮಾಡಲು ಕೋರಲಾಗಿದೆ.

ಲಸಿಕೆ ಲಭ್ಯತೆಗಳನ್ನು ಮುಂದಿನ ದಿನಗಳಲ್ಲಿ ಪತ್ರಿಕೆ ಮುಖಾಂತರ ತಿಳಿಸಲಾಗುವುದು ಹಾಗೂ ಎಸ್.ಎಂ.ಎಸ್ ಕಳುಹಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಲಿಂಕ್:
https://docs.google.com/forms/d/e/1FAIpQLScLntiRTE7JnvnT-AwcllzmrrLCZe2aCkN_gu3U13VcnG8cug/viewform

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು- 41.2 ಮಿಮೀ ಮಳೆ

ಉಡುಪಿ, ಜ.15: ಉಡುಪಿ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು ಕಾಪು...

ಉಚಿತ ನೇತ್ರ ತಪಾಸಣಾ ಶಿಬಿರ, ರಸ್ತೆ ಸುರಕ್ಷತಾ ಜಾಗೃತಿ ಜಾಥ

ಕೋಟ, ಜ.15: ಪ್ರಸ್ತುತ ದಿನಗಳಲ್ಲಿ ರಸ್ತೆ ಅವಘಡಗಳು ಹೆಚ್ಚುತ್ತಿವೆ, ಇದಕ್ಕೆ ಕಾರಣ...

ಭಾರತೀಯರಲ್ಲಿ ಸ್ವಾಭಿಮಾನ ಉದ್ದೀಪಿಸಿದ ವಿವೇಕಾನಂದರು: ಪ್ರಸ್ತುತ ವೈ ಎನ್

ಶಂಕರನಾರಾಯಣ, ಜ.15: ಸ್ವಾಮಿ ವಿವೇಕಾನಂದರು ತಮ್ಮ ಕಾಲದಲ್ಲಿ ವಿದ್ಯಾವಂತರಲ್ಲಿ ತಮ್ಮ ಪರಂಪರೆಯ...

ಮಾರ್ಕ್ ಜುಕರ್‌ಬರ್ಗ್ ಚುನಾವಣಾ ಹೇಳಿಕೆ- ಮೆಟಾ ಕ್ಷಮೆಯಾಚನೆ

ಯು.ಬಿ.ಎನ್.ಡಿ., ಜ.15: ಮಾರ್ಕ್ ಜುಕರ್‌ಬರ್ಗ್ ಅವರ ಭಾರತೀಯ ಚುನಾವಣಾ ಹೇಳಿಕೆಗಳಿಗೆ ಮೆಟಾ...
error: Content is protected !!