ಪ್ರಸ್ತುತ ಕೋವಿಡ್ ಲಾಕ್‌ಡೌನ್ ಸಡಿಲಗೊಂಡ ಹಿನ್ನಲೆಯಲ್ಲಿ ಕ.ರಾ.ರ.ಸ.ನಿಗಮದ ವತಿಯಿಂದ ಮಂಗಳೂರು-ಹೈದ್ರಾಬಾದ್, ಮಂಗಳೂರು-ಮಂತ್ರಾಲಯ ಮಾರ್ಗದಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 25 ರಿಂದ ಪುನಃ ಸಾರಿಗೆಗಳ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ಸಾರಿಗೆ ಕಾರ್ಯಾಚರಣೆಯ ವಿವರ:
ಅಂಬಾರಿ ಡ್ರೀಮ್ ಕ್ಲಾಸ್ ವೋಲ್ವೋ ಎಸಿ ಸ್ಲೀಪರ್ ಸಾರಿಗೆಯು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಿಂದ ಹೊರಟು ಉಡುಪಿ, ಮಣಿಪಾಲ, ಕುಂದಾಪುರ, ಕುಮಟ, ಹುಬ್ಬಳ್ಳಿ, ರಾಯಚೂರು, ಮೆಹಬೂಬನಗರ ಮಾರ್ಗವಾಗಿ ಬೆಳಗ್ಗೆ 9 ಗಂಟೆಗೆ ಹೈದ್ರಾಬಾದ್ ತಲುಪಲಿದೆ. ಮರು ಪ್ರಯಾಣದಲ್ಲಿ ಸಂಜೆ 5 ಗಂಟೆಗೆ ಹೈದ್ರಾಬಾದ್‌ನಿಂದ ಹೊರಟು ಮೆಹಬೂಬನಗರ, ರಾಯಚೂರು, ಹುಬ್ಬಳ್ಳಿ, ಕುಮಟ, ಕುಂದಾಪುರ, ಮಣಿಪಾಲ, ಉಡುಪಿ ಮಾರ್ಗವಾಗಿ ಬೆಳಗ್ಗೆ 10 ಗಂಟೆಗೆ ಮಂಗಳೂರು ತಲುಪಲಿದೆ.
ನಾನ್ ಎಸಿ ಸ್ಲೀಪರ್ ಸಾರಿಗೆಯು ಮಧ್ಯಾಹ್ಮ 3.30 ಕ್ಕೆ ಮಂಗಳೂರಿನಿಂದ ಹೊರಟು ಉಡುಪಿ, ಕುಂದಾಪುರ, ಸಿದ್ಧಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಮಾರ್ಗವಾಗಿ ಬೆಳಗ್ಗೆ 6.30 ಕ್ಕೆ ಮಂತ್ರಾಲಯ ತಲುಪಲಿದ್ದು, ಮರು ಪ್ರಯಾಣದಲ್ಲಿ ಸಂಜೆ 5 ಗಂಟೆಗೆ ಮಂತ್ರಾಲಯದಿಂದ ಹೊರಟು ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ತೀರ್ಥಹಳ್ಳಿ, ಸಿದ್ಧಾಪುರ, ಕುಂದಾಪುರ, ಉಡುಪಿ ಮಾರ್ಗವಾಗಿ ಬೆಳಗ್ಗೆ 7.30 ಕ್ಕೆ ಮಂಗಳೂರು ತಲುಪಲಿದೆ.
ಈ ಸಾರಿಗೆಗಳಲ್ಲಿ ಆನ್‌ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯಕ್ಕೆ http://www.ksrtc.in ಹತ್ತಿರದ ರಿಸರ್ವೇಶನ್ ಕೌಂಟರ್ ಅನ್ನು ಸಂಪರ್ಕಿಸುವಂತೆ ಮಂಗಳೂರು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.