ಪುಣೆ: ಫೇಕ್ ಟೂರ್ ಪ್ಯಾಕೇಜ್ ಮೂಲಕ 30 ಮಂದಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ವಂಚಕರನ್ನು ಪುಣೆಯ ಹಿಂಜೆವಾಡಿ ಪೊಲೀಸರು ಬಂಧಿಸಿದ್ದಾರೆ.
ಬಣ್ಣ ಬಣ್ಣದ ಪೋಸ್ಟರ್ ಮೂಲಕ ಭಾರತ ಸಹಿತ ವಿದೇಶಗಳಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಪ್ರತಿ ವ್ಯಕ್ತಿಯ ಬಳಿ ಒಂದೂವರೆ ಲಕ್ಷ ರೂಪಾಯಿ ಪಡೆದು ಆನಂತರ ತಲೆಮರೆಸಿಕೊಳ್ಳುತ್ತಿದ್ದ 6 ಮಂದಿ ವಂಚಕರ ಬಗ್ಗೆ ಅಲ್ಲಲ್ಲಿ ದೂರುಗಳು ಬಂದ ನಂತರ ಎಚ್ಚೆತ್ತ ಪೊಲೀಸರು, ಪುಣೆಯ ಹೋಟೇಲೊಂದರಲ್ಲಿ ಕೂತು ಇನ್ನಷ್ಟು ಮಂದಿಯನ್ನು ವಂಚಿಸಲು ಯೋಜನೆ ರೂಪಿಸುತ್ತಿದ್ದ ವಂಚಕರನ್ನು ರೆಡ್ ಹ್ಯಾಂಡ್ ಬಂಧಿಸಿದ್ದಾರೆ.