ನವದೆಹಲಿ: ಸರಕುಗಳ ಪ್ರಮಾಣೀಕರಣ, ಮಾರುಕಟ್ಟೆ ಮತ್ತು ಗುಣಮಟ್ಟದ ಪ್ರಮಾಣೀಕರಣದ ಚಟುವಟಿಕೆಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾದ ಭಾರತದ ರಾಷ್ಟ್ರೀಯ ಪ್ರಮಾಣಿತ ಸಂಸ್ಥೆಯಾಗಿರುವ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಲ್ಲಿ ಖಾಲಿ ಇರುವ ಒಟ್ಟು 337 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ.
ವಿವಿಧ ಹುದ್ದೆಗಳಾದ ಸ್ಟೆನೊಗ್ರಾಫರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಜೂನಿಯರ್ ಸೆಕ್ರೆಟೇರಿಯೆಟ್ ಅಸಿಸ್ಟೆಂಟ್, ಸೀನಿಯರ್ ಸೆಕ್ರೆಟೇರಿಯೆಟ್ ಅಸಿಸ್ಟೆಂಟ್, ಸೀನಿಯರ್ ಟೆಕ್ನೀಶಿಯನ್, ಪರ್ಸನಲ್ ಅಸಿಸ್ಟೆಂಟ್, ಟೆಕ್ನಿಕಲ್ ಅಸಿಸ್ಟೆಂಟ್, ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿಯನ್ನು ಆನ್ ಲೈನ್ ನಲ್ಲಿ ಏಪ್ರಿಲ್ 19ರಿಂದ ಸಲ್ಲಿಸಲು ಅವಕಾಶವಿದ್ದು ಅರ್ಜಿ ಸಲ್ಲಿಸಲು ಮೇ 9 ಕೊನೆಯ ದಿನವಾಗಿದೆ. ಡೈರೆಕ್ಟ್ ರಿಕ್ರೂಟ್ಮೆಂಟ್ ಮೂಲಕ ಅಬ್ಯರ್ಥಿಗಳ ಆಯ್ಕೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ವೆಬ್ ಸೈಟ್ http://www.bis.gov.in/ ನೋಡಿ.