ಉಡುಪಿ, ಜ.13: ಭಾರತೀಯ ವಾಯುಪಡೆಯಲ್ಲಿ ಏರ್‌ಮ್ಯಾನ್ ಮತ್ತು ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಏರ್‌ಮ್ಯಾನ್ ಆಗಿ ಗ್ರೂಪ್ ವೈ (ತಾಂತ್ರಿಕವಲ್ಲದ) (ಎ) ವೈದ್ಯಕೀಯ ಸಹಾಯಕ ವೃತ್ತಿಗೆ ಸೇರಲು 10+2 ವಿದ್ಯಾರ್ಹತೆ ಹೊಂದಿದ ಅವಿವಾಹಿತ ಅಭ್ಯರ್ಥಿಯು 2004 ರ ಜುಲೈ 3 ಮತ್ತು 2008 ರ ಜುಲೈ 03 ರ ನಡುವೆ ಜನಿಸಿರಬೇಕು. (ಬಿ)ವೈದ್ಯಕೀಯ ಸಹಾಯಕ ವೃತ್ತಿಗೆ ಫಾರ್ಮಸಿಯಲ್ಲಿ ಡಿಪ್ಲೋಮಾ/ ಬಿ.ಎಸ್ಸಿ ಆಗಿರುವ ಅವಿವಾಹಿತ ಅಭ್ಯರ್ಥಿಯು 2001 ರ ಜುಲೈ 03 ಮತ್ತು 2006 ರ ಜುಲೈ 03 ನಡುವೆ ಜನಿಸಿರಬೇಕು. ವಿವಾಹಿತ ಅಭ್ಯರ್ಥಿಯು 2001 ರ ಜುಲೈ 03 ಮತ್ತು 2004 ರ ಜುಲೈ 03 ನಡುವೆ ಜನಿಸಿರಬೇಕು.
ರ‍್ಯಾಲಿಯು ಕೇರಳ ಕೊಚ್ಚಿಯ ಎರ್ನಾಕುಲಂ ಪಿ.ಟಿ. ಉಷಾ ರಸ್ತೆಯ ಮಹಾರಾಜ ಕಾಲೇಜು ಮೈದಾನದಲ್ಲಿ ಜನವರಿ 29 ರಿಂದ ಫೆಬ್ರವರಿ 6 ರ ವರೆಗೆ ಮುಂಜಾನೆ 6 ಘಂಟೆ ಯಿಂದ 10 ಘಂಟೆಯವರೆಗೆ ನಡೆಯಲಿದ್ದು, ಮಾಹಿತಿಗಾಗಿ ವೆಬ್‌ಸೈಟ್ http://www.airmenselection.cdac.in ಗೆ ಭೇಟಿ ನೀಡಬಹುದಾಗಿದೆ. ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2005 ರ ಜನವರಿ 01 ಮತ್ತು 2008 ರ ಜುಲೈ 01 ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಬಹುದಾಗಿದ್ದು, ಜನವರಿ 27 ರವರೆಗೆ ವೆಬ್‌ಸೈಟ್ http://agnipathvayu.cdac.in ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದಿ,್ರ ಮಣಿಪಾಲ ಉಡುಪಿ ಅಥವಾ ವೆಬ್‌ಸೈಟ್ https://careerindianairforce.cdac.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.