ನವದೆಹಲಿ, ಜ.1: ಹ್ಯುಂಡೈ ಮೋಟಾರ್ ಇಂಡಿಯಾ 2023 ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ದೇಶೀಯ ಮಾರಾಟವನ್ನು ಸಾಧಿಸಿ, ಆರು ಲಕ್ಷ ಮಾರಾಟದ ಮೈಲಿಗಲ್ಲನ್ನು ಮೀರಿಸಿದೆ. ವಾಹನ ತಯಾರಕ ಸಂಸ್ಥೆಯು 2023 ರಲ್ಲಿ 6,02,111 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. ಹಿಂದಿನ ವರ್ಷದ 5,52,511 ಯುನಿಟ್‌ಗಳಿಗಿಂತ 9 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ. ಹೆಚ್ಚುವರಿಯಾಗಿ, ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ರಫ್ತು ಕಾರ್ಯಕ್ಷಮತೆಯನ್ನು ಶೇ. 10 ಪ್ರತಿಶತದಷ್ಟು ಹೆಚ್ಚಿಸಿದೆ. ಹಿಂದಿನ ವರ್ಷದಲ್ಲಿ 1,48,300 ಯುನಿಟ್‌ಗಳಿಗೆ ಹೋಲಿಸಿದರೆ, 2023 ರಲ್ಲಿ 1,63,675 ಯುನಿಟ್‌ಗಳನ್ನು ರಫ್ತುಮಾಡಿದೆ.
2023 ರಲ್ಲಿ ಅತಿ ಹೆಚ್ಚು ದೇಶೀಯ ಮಾರಾಟ ದಾಖಲಿಸಿದ ಹ್ಯುಂಡೈ

2023 ರಲ್ಲಿ ಅತಿ ಹೆಚ್ಚು ದೇಶೀಯ ಮಾರಾಟ ದಾಖಲಿಸಿದ ಹ್ಯುಂಡೈ
Date: