ನವದೆಹಲಿ, ಮೇ 7: ಮೂರನೇ ಹಂತದ ಲೋಕಸಭಾ ಚುನಾವಣೆಯ ಪ್ರಯುಕ್ತ ಮಂಗಳವಾರ ದೇಶಾದ್ಯಂತ 11 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ. 60.97 ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಅಸ್ಸಾಮ್ ನಲ್ಲಿ ಗರಿಷ್ಠ ಶೇ. 75.01 ಮತದಾನವಾಗಿದ್ದು, ಮಹಾರಾಷ್ಟ್ರದಲ್ಲಿ ಕಡಿಮೆ (ಶೇ. 53.95) ಮತದಾನವಾಗಿದೆ.
ರಾಜ್ಯವಾರು ಮತದಾನ ವಿವರ: ಕರ್ನಾಟಕ- ಶೇ. 66.80, ಬಿಹಾರ- ಶೇ. 56.55, ಚತ್ತೀಸ್ಘಢ- ಶೇ. 66.94, ಗೋವಾ- ಶೇ. 74.00, ಗುಜರಾತ್- ಶೇ. 56.21, ಮಧ್ಯಪ್ರದೇಶ- ಶೇ. 62.79, ಉತ್ತರ ಪ್ರದೇಶ- ಶೇ. 57.04, ಪಶ್ಚಿಮ ಬಂಗಾಳ- ಶೇ. 73.93, ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ, ನಗರ ಹವೇಲಿ, ದಾಮನ್ ದಿಯು ಇಲ್ಲಿ ಶೇ. 65.23 ಮತದಾನವಾಗಿದೆ.