ನಲ್ಬರಿ, (ಅಸ್ಸಾಂ), ಏ.17: ಬುಧವಾರ ರಾಮನವಮಿಯ ಪ್ರಯುಕ್ತ ಅಯೋಧ್ಯಾ ರಾಮಮಂದಿರಲ್ಲಿ ಬಾಲರಾಮನಿಗೆ ಸೂರ್ಯ ತಿಲಕ ಇಡಲಾಗಿತ್ತು. ಸೂರ್ಯವಂಶಸ್ಥನಾದ ಶ್ರೀರಾಮನಿಗೆ ಸೂರ್ಯತಿಲಕ ಇಡುವ ಕಾರ್ಯಕ್ರಮಕ್ಕೆ ಬಹಳ ವಿಶೇಷ ಅರ್ಥವಿದೆ. ಸೂರ್ಯ ತಿಲಕದ ದೃಶ್ಯಾವಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ವಿಮಾನದಲ್ಲಿ ವೀಕ್ಷಿಸಿದರು. ಅಸ್ಸಾಂ ಸಮಾವೇಶದ ನಂತರ ಪ್ರಧಾನಿ ಮೋದಿ ಅವರು ವಿಮಾನದಲ್ಲಿ ರಾಮ್ ಲಲ್ಲಾ ಸೂರ್ಯ ತಿಲಕವನ್ನು ವೀಕ್ಷಿಸಿದರು. ಈ ಕುರಿತು ತಮ್ಮ ಎಕ್ಸ್ ನಲ್ಲಿ ಅಭಿಪ್ರಾಯವ್ಯಕ್ತಪಡಿಸಿದ ಪ್ರಧಾನಿ, ‘ನನ್ನ ನಲ್ಬರಿ ಸಮಾವೇಶದ ನಂತರ, ನಾನು ರಾಮ್ ಲಲ್ಲಾನ ಸೂರ್ಯ ತಿಲಕವನ್ನು ವೀಕ್ಷಿಸಿದೆ. ಕೋಟಿಗಟ್ಟಲೆ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಕ್ಷಣ. ಅಯೋಧ್ಯೆಯ ರಾಮನವಮಿಯು ಐತಿಹಾಸಿಕವಾಗಿದೆ. ಈ ಸೂರ್ಯ ತಿಲಕ ನಮ್ಮ ಜೀವನಕ್ಕೆ ಶಕ್ತಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರವು ವೈಭವದ ಹೊಸ ಎತ್ತರಗಳನ್ನು ಏರಲು ಪ್ರೇರೇಪಿಸಲಿ’ ಎಂದು ಹೇಳಿದ್ದಾರೆ.
ರಾಮಲಲ್ಲಾ ಮೂರ್ತಿಯಲ್ಲಿ ಮೂಡಿದ ಸೂರ್ಯತಿಲಕ; ಭಾವನಾತ್ಮಕ ಕ್ಷಣವೆಂದ ಪ್ರಧಾನಿ ಮೋದಿ
ರಾಮಲಲ್ಲಾ ಮೂರ್ತಿಯಲ್ಲಿ ಮೂಡಿದ ಸೂರ್ಯತಿಲಕ; ಭಾವನಾತ್ಮಕ ಕ್ಷಣವೆಂದ ಪ್ರಧಾನಿ ಮೋದಿ
Date: