ನವದೆಹಲಿ, ಫೆ.4: ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ಭಾನುವಾರ ದೆಹಲಿ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ‘ಶ್ರೀ ರಾಮಾಯಣ ಯಾತ್ರೆ’ ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲಿಗೆ ಚಾಲನೆ ನೀಡಿದರು. ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಸ್ಥಳಗಳನ್ನು ಜನರಿಗೆ ಪ್ರದರ್ಶಿಸಲು ‘ದೇಖೋ ಅಪ್ನಾ ದೇಶ್’ ಉಪಕ್ರಮದ ಅಡಿಯಲ್ಲಿ ಈ ರೈಲನ್ನು ನಡೆಸಲಾಗುತ್ತಿದೆ. ಜನಪ್ರಿಯ ಬೇಡಿಕೆಯಿಂದಾಗಿ, ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರವಾಸ ‘ಶ್ರೀ ರಾಮಾಯಣ ಯಾತ್ರೆ’ ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ಟ್ರೈನ್ ಅನ್ನು ನಿರ್ವಹಿಸಲು ರೈಲ್ವೇ ನಿರ್ಧರಿಸಿದೆ. ಅಯೋಧ್ಯೆ, ನಂದಿಗ್ರಾಮ, ಜನಕಪುರ, ಸೀತಾಮರ್ಹಿ, ಬಕ್ಸರ್, ವಾರಣಾಸಿ, ಪ್ರಯಾಗ್ರಾಜ್, ಶೃಂಗವೇರಪುರ, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಭದ್ರಾಚಲಂ ಮತ್ತು ನಾಗ್ಪುರ ಹೀಗೆ ಭಗವಾನ್ ರಾಮನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳಿಗೆ ರೈಲು ಸಂಚರಿಸುತ್ತದೆ.
‘ಶ್ರೀ ರಾಮಾಯಣ ಯಾತ್ರೆ’ ಭಾರತ್ ಗೌರವ್ ಡಿಲಕ್ಸ್ ಎಸಿ ರೈಲಿಗೆ ಚಾಲನೆ

‘ಶ್ರೀ ರಾಮಾಯಣ ಯಾತ್ರೆ’ ಭಾರತ್ ಗೌರವ್ ಡಿಲಕ್ಸ್ ಎಸಿ ರೈಲಿಗೆ ಚಾಲನೆ
Date: