ನವದೆಹಲಿ: 70 ವರ್ಷಗಳ ಹಿಂದೆ ಭಾರತದಲ್ಲಿ ಅಳಿದು ಹೋಗಿದ್ದ ಚೀತಾ ಸಂತತಿ ಮತ್ತೆ ಮರಳಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮ ದಿನದಂದು ನಮೀಬಿಯಾದಿಂದ ವಿಶೇಷ ವಿಮಾನ ಮೂಲಕ ಭಾರತಕ್ಕೆ ಕರೆತರಲಾದ 8 ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಬೋನಿನ ಬಾಗಿಲುಗಳನ್ನು ತೆರೆದು ಹೊರಗಡೆ ಬಿಟ್ಟರು. ಇಷ್ಟು ಮಾತ್ರವಲ್ಲದೇ, ಸಫಾರಿಗೆ ತೆರಳುವ ಧಿರಿಸಿನಲ್ಲಿದ್ದ ಪ್ರಧಾನಿ ಮೋದಿ ಸ್ವತಃ ಕ್ಯಾಮರಾದಲ್ಲಿ ಚೀತಾಗಳ ಫೋಟೋಗಳನ್ನು ಕ್ಲಿಕ್ಕಿಸಿದರು.
ನಮೀಬಿಯಾದಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಆರಂಭಿಸಿದ 8 ಚೀತಾಗಳು ಇಂದು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿರುವ ವಾಯುಪಡೆಯ ವಿಮಾನ ನಿಲ್ದಾಣಕ್ಕೆ ಬಂದಿಳಿದವು.
ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಬಿ747 ಜಂಬೋ ಜೆಟ್ನಿಂದ 8 ಚೀತಾಗಳನ್ನು ಭಾರತಕ್ಕೆ ಕರೆತರಲಾಗಿದೆ. ಇವುಗಳಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳಿವೆ.