ನವದೆಹಲಿ, ಆ.20: ವೈದ್ಯಕೀಯ ವೃತ್ತಿಪರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ರಾಷ್ಟ್ರೀಯ ಕಾರ್ಯಪಡೆಯನ್ನು ಸ್ಥಾಪಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ, ಕೋಲ್ಕತ್ತಾ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸಿದಾಗ, ಮೂರು ವಾರಗಳಲ್ಲಿ ತನ್ನ ಮಧ್ಯಂತರ ವರದಿಯನ್ನು ಮತ್ತು ಎರಡು ತಿಂಗಳೊಳಗೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಕಾರ್ಯಪಡೆಗೆ ಸೂಚಿಸಿದೆ. ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರವ್ಯಾಪಿ ಅನುಸರಿಸಬೇಕಾದ ವಿಧಾನಗಳ ಕುರಿತು ಶಿಫಾರಸುಗಳನ್ನು ಒದಗಿಸಲು ನ್ಯಾಯಾಲಯವು ದೇಶಾದ್ಯಂತದ ವೈದ್ಯರನ್ನು ಒಳಗೊಂಡ ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸುತ್ತಿದೆ ಎಂದು ಸಿಜೆಐ ಹೇಳಿದರು.
ಕಾರ್ಯಪಡೆಯಲ್ಲಿ ಯಾರೆಲ್ಲ ಇದ್ದಾರೆ?: ಶಸ್ತ್ರಚಿಕಿತ್ಸಕ ವೈಸ್ ಅಡ್ಮಿರಲ್ ಆರ್.ಸರಿನ್, ಡಾ. ಡಿ.ನಾಗೇಶ್ವರ್ ರೆಡ್ಡಿ, ಡಾ. ಎಂ.ಶ್ರೀನಿವಾಸ್, ಡಾ. ಪ್ರತಿಮಾಮೂರ್ತಿ, ಡಾ. ಗೋವರ್ಧನ್ ದತ್ ಪುರಿ, ಡಾ. ಸೌಮಿತ್ರಾ ರಾವತ್, ಪ್ರೊ.ಅನಿತಾ ಸಕ್ಸೇನಾ (ಹೃದ್ರೋಗ ವಿಭಾಗದ ಮುಖ್ಯಸ್ಥೆ, ಏಮ್ಸ್ ದೆಹಲಿ), ಪ್ರೊ. ಪಲ್ಲವಿ ಸಪ್ರೆ (ಡೀನ್, ಗ್ರಾಂಟ್ ಮೆಡಿಕಲ್ ಕಾಲೇಜು ಮುಂಬೈ), ಮತ್ತು ಡಾ. ಪದ್ಮಾ ಶ್ರೀವಾಸ್ತವ (ನರಶಾಸ್ತ್ರ ವಿಭಾಗ, ಏಮ್ಸ್)