Friday, October 25, 2024
Friday, October 25, 2024

ಒಂದೇ ಋತುವಿನಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಲೋತ್ಸೆಯನ್ನು ಏರಿ ಇತಿಹಾಸ ನಿರ್ಮಿಸಿದ ಸತ್ಯದೀಪ್

ಒಂದೇ ಋತುವಿನಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಲೋತ್ಸೆಯನ್ನು ಏರಿ ಇತಿಹಾಸ ನಿರ್ಮಿಸಿದ ಸತ್ಯದೀಪ್

Date:

ನವದೆಹಲಿ, ಮೇ 29: ಭಾರತದ ಪರ್ವತಾರೋಹಿ ಸತ್ಯದೀಪ್ ಗುಪ್ತಾ ಒಂದು ಋತುವಿನಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಲೋತ್ಸೆಯನ್ನು ಏರಿದ ಮೊದಲ ವ್ಯಕ್ತಿಯಾಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ಮೌಂಟ್ ಎವರೆಸ್ಟ್ ನಿಂದ ಮೌಂಟ್ ಲೊಟ್ಸೆಗೆ 11 ಗಂಟೆ 15 ನಿಮಿಷಗಳಲ್ಲಿ ಕ್ರಮಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನೂ ಅವರು ನಿರ್ಮಿಸಿದ್ದಾರೆ. ಸಂಘಟಕರ ಪ್ರಕಾರ, ಗುಪ್ತಾ ಸೋಮವಾರ ಮಧ್ಯಾಹ್ನ 8,516 ಮೀಟರ್ ಎತ್ತರದ ಲೊಟ್ಸೆಯನ್ನು ಏರಿ, ನಂತರ ಮಧ್ಯರಾತ್ರಿ 12:45 ಕ್ಕೆ 8,849 ಮೀಟರ್ ಎತ್ತರದ ಮೌಂಟ್ ಎವರೆಸ್ಟ್‌ ಏರಿದರು. ಅವರ ಜೊತೆಯಲ್ಲಿ ಕ್ಲೈಂಬಿಂಗ್ ಗೈಡ್‌ಗಳಾದ ಪಾಸ್ತೆಂಬಾ ಶೆರ್ಪಾ ಮತ್ತು ನಿಮಾ ಉಂಗ್ಡಿ ಶೆರ್ಪಾ ಇದ್ದರು. ಗುಪ್ತಾ ಈ ಹಿಂದೆ ಮೇ 21 ರಂದು ಮೌಂಟ್ ಎವರೆಸ್ಟ್ ಮತ್ತು ಮೇ 22 ರಂದು ಮೌಂಟ್ ಲೋತ್ಸೆಯನ್ನು ಏರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆಯೊಂದಿಗೆ ಸಹಕರಿಸಿ

ಉಡುಪಿ, ಅ.25: ಉಡುಪಿ ನಗರಸಭೆಯು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ವಿವಿಧ...

ಕಟ್ಟಡಗಳ ಭಗ್ನ ಅವಶೇಷಗಳನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಲು ಸೂಚನೆ

ಉಡುಪಿ, ಅ.25: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡಗಳ ಭಗ್ನ ಅವಶೇಷಗಳನ್ನು ಎಲ್ಲೆಂದರಲ್ಲಿ...

ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ

ಉಡುಪಿ, ಅ.25: ರಾಜ್ಯ ಸರ್ಕಾರದ ಆದೇಶದಂತೆ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಾ...

ಅ.26: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ವತಿಯಿಂದ ಜಾಗೃತಿ ನಡಿಗೆ

ಉಡುಪಿ, ಅ.25: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ವತಿಯಿಂದ ಉಪಶಾಮಾಕ ಆರೈಕೆ ದಿನದ...
error: Content is protected !!