ಹೈದರಾಬಾದ್: ದೇಶದಾದ್ಯಂತ ಹಲವು ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಅವುಗಳ ಅರ್ಹ ಫಲಾನುಭವಿಗಳಿಗೆ ಸುಮಾರು ರೂ. 25 ಲಕ್ಷ ಕೋಟಿ ಹಂಚಿಕೆಯನ್ನು ಪ್ರಧಾನ ಮಂತ್ರಿ ಜನಧನ ಯೋಜನೆಗಳ ಮೂಲಕ ಮಾಡಲಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದರು.
ಶೇ. ಅರ್ಧದಷ್ಟು ಮಹಿಳೆಯರ ಖಾತೆ: 50 ಕೋಟಿ ಪ್ರಧಾನ ಮಂತ್ರಿ ಜನಧನ ಖಾತೆಗಳಲ್ಲಿ ಅರ್ಧದಷ್ಟು ಖಾತೆಗಳು ಮಹಿಳೆಯರದ್ದು ಎಂದು ಸಚಿವ ರೆಡ್ಡಿ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ನೀಡಿದರು. ಕೇಂದ್ರ ಸರ್ಕಾರ ಹಲವು ಕಲ್ಯಾಣ ಕಾರ್ಯಕ್ರಮಗಳ ಮೂಲಕ ಬಡವರಿಗೆ ಜನಧನ ಖಾತೆಯಿಂದ ರೂ. 25 ಲಕ್ಷ ಕೋಟಿಯನ್ನು ಬಿಡುಗಡೆ ಮಾಡಿದೆ.
ಮಧ್ಯವರ್ತಿಗಳ ಹಾವಳಿಗೆ ಬ್ರೇಕ್: ಸಹಾಯಧನವನ್ನು ನೇರವಾಗಿ ಖಾತೆಗೆ ಜಮೆ ಮಾಡಲು ಆರಂಭಗೊಂಡ ನಂತರ ನಕಲಿ ಪಡಿತರ ಚೀಟಿಗಳು, ನಕಲಿ ಎಲ್‌ಪಿಜಿ ಸಿಲಿಂಡರ್ ಖಾತೆಗಳು ರದ್ದುಗೊಂಡಿವೆ ತನ್ಮೂಲಕ ಒಂದೇ ಒಂದು ಪೈಸೆಯೂ ಮಧ್ಯವರ್ತಿಗಳ ಕೈಸೇರುತ್ತಿಲ್ಲ ಎಂದರು.