ನವದೆಹಲಿ: ಅತಿವೇಗದ ಹುಚ್ಚು ಅಪಘಾತದಲ್ಲಿ ಅಂತ್ಯವಾದ ಘಟನೆ ಪೂರ್ವಾಂಚಲ ಎಕ್ಸ್ ಪ್ರೆಸ್ ಸುಲ್ತಾನಪುರದಲ್ಲಿ ನಡೆದಿದೆ. ಗಂಟೆಗೆ 300 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಬಿಎಂಡಬ್ಲ್ಯೂ ಕಾರಿನಲ್ಲಿ ವೈದ್ಯರು, ಎಂಜಿನಿಯರ್, ಇನ್ನಿಬ್ಬರು ಸಾವನ್ನಪ್ಪಿದ್ದಾರೆ.
ಘಟನೆ ನಡೆಯುವ ಕೆಲವೇ ನಿಮಿಷಗಳ ಹಿಂದೆ ಕಾರಿನಲ್ಲಿದ್ದವರು ಫೇಸ್ಬುಕ್ ಲೈವ್ ಕೂಡ ಮಾಡಿ “ಚಾರೋ ಮರೆಂಗೆ (ನಾವೆಲ್ಲರೂ ಸಾಯುತ್ತೇವೆ)” ಎಂದು ಹೇಳಿದರು.
ಬಿಹಾರದ ರೋಹ್ಟಾಸ್ ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಆನಂದ್ ಪ್ರಕಾಶ್ ಸಹಪ್ರಯಾಣಿಕರ ಜೊತೆಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಗಂಟೆಗೆ 230 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.
ಕೆಲವೇ ಸೆಕೆಂಡುಗಳಲ್ಲಿ ನಾವು 300 ಕಿಮೀ ವೇಗದಲ್ಲಿ ಹೋಗುತ್ತೇವೆ, ಸಾಯಲೂಬಹುದು ಎಂದು ಹೇಳುವಷ್ಟರಲ್ಲಿ ಟ್ರಕ್ ಗೆ ಡಿಕ್ಕಿ ಹೊಡೆದ ಬಿಎಂಡಬ್ಲ್ಯೂ ನಜ್ಜುಗುಜ್ಜಾಗಿ ಮುದ್ದೆಯಾಗಿ ಬಿದ್ದಿದ್ದು ಒಳಗಿದ್ದವರ ರಕ್ತಸಿಕ್ತ ದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು. ವೈದ್ಯ ಆನಂದ್ ಪ್ರಕಾಶ್, ಎಂಜಿನಿಯರ್ ದೀಪಕ್ ಕುಮಾರ್, ಅಖಿಲೇಶ್ ಸಿಂಗ್ ಮತ್ತು ಉದ್ಯಮಿ ಮುಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸುಲ್ತಾನ್ಪುರ ಎಸ್ಪಿ ಸೋಮನ್ ಬರ್ಮಾ ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ತನಿಖೆ ಮಾಡಲಾಗುತ್ತಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಅತಿವೇಗದ ಚಾಲನೆ ಜೀವಕ್ಕೆ ಅಪಾಯ. ವಾಹನ ಚಲಾಯಿಸುವಾಗ ನಿಮ್ಮ ಹಾಗೂ ಇತರರ ಜೀವದ ಬಗ್ಗೆ ಕಾಳಜಿ ಇರಲಿ. ರಸ್ತೆ ಸುರಕ್ಷತಾ/ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಿ.