ಪಣಜಿ: ಹೊಸ ವರ್ಷಾಚರಣೆಗೆ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಗೋವಾಗೆ ಭೇಟಿ ನೀಡಿದರು. ಇದೀಗ ಸೋಂಕು ಹರಡುವಿಕೆ ವೇಗ ಪಡೆದುಕೊಂಡಿದ್ದು, ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಜನವರಿ 26 ರವರೆಗೆ 8 ಮತ್ತು 9 ನೇ ತರಗತಿಗಳಿಗೆ ಫಿಸಿಕಲ್ ಕ್ಲಾಸ್ ನಡೆಯುವುದಿಲ್ಲ. 10 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಲಸಿಕೆಗಾಗಿ ಮಾತ್ರ ಶಾಲಾ ಕಾಲೇಜುಗಳಿಗೆ ಬರಬೇಕು.
ಜನವರಿ 26 ರವರೆಗೆ ಕಾಲೇಜುಗಳು ಮುಚ್ಚಲ್ಪಡುತ್ತವೆ ಎಂದು ಟಾಸ್ಕ್ ಫೋರ್ಸ್ ಸದಸ್ಯ ಡಾ. ಶೇಖರ್ ಸಾಲ್ಕರ್ ತಿಳಿಸಿದ್ದಾರೆ.
ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಕರ್ಫ್ಯೂ ಇರುತ್ತದೆ. ಜನವರಿ 26 ರ ಮೊದಲು ಮತ್ತೊಮ್ಮೆ ಟಾಸ್ಕ್ ಫೋರ್ಸ್ ಸಭೆ ಸೇರುತ್ತದೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.