ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ವಿವಾಹದ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸದಿದ್ದರೂ, ನೀರಜ್ ಚೋಪ್ರಾ ಅವರ ಘೋಷಣೆಯು ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ.
ಹಿಮಾನಿ ಮೋರ್ ಯಾರು? ಮೂಲತಃ ಸೋನಿಪತ್‌ನವರಾದ ಹಿಮಾನಿ ಮೋರ್ ಪ್ರಸ್ತುತ ಅಮೆರಿಕದಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ. ವಿವಾಹ ಸಮಾರಂಭವು ಭಾರತದಲ್ಲಿ ನಡೆದಿದ್ದು, ನವವಿವಾಹಿತರು ತಮ್ಮ ಮಧುಚಂದ್ರಕ್ಕೆ ತೆರಳಿದ್ದಾರೆ ಎಂದು ನೀರಜ್ ಅವರ ಚಿಕ್ಕಪ್ಪ ಭೀಮ್ ಪಿಟಿಐಗೆ ತಿಳಿಸಿದ್ದಾರೆ.
“ಹೌದು, ಮದುವೆ ಎರಡು ದಿನಗಳ ಹಿಂದೆ ಭಾರತದಲ್ಲಿ ನಡೆಯಿತು. ಅದು ಎಲ್ಲಿ ನಡೆಯಿತು ಎಂದು ನನಗೆ ಹೇಳಲು ಸಾಧ್ಯವಿಲ್ಲ” ಎಂದು ಹರಿಯಾಣದ ಪಾಣಿಪತ್ ಬಳಿಯ ಖಂದ್ರಾದಲ್ಲಿ ವಾಸವಾಗಿರುವ ಭೀಮ್ ಹೇಳಿದರು. “ಹುಡುಗಿ ಸೋನಿಪತ್‌ನವಳು ಮತ್ತು ಅವಳು ಯುಎಸ್‌ನಲ್ಲಿ ಓದುತ್ತಿದ್ದಾಳೆ. ಅವರು ಹನಿಮೂನ್‌ಗೆ ತೆರಳಿದ್ದಾರೆ ಮತ್ತು ಅವರು ಎಲ್ಲಿಗೆ ಹೋಗುತ್ತಿದ್ದಾರೆಂದು ನನಗೆ ತಿಳಿದಿಲ್ಲ. ನಾವು ಅದನ್ನು ಹಾಗೆಯೇ ಇರಿಸಿಕೊಳ್ಳಲು ಬಯಸಿದ್ದೇವೆ” ಎಂದು ಖಂದ್ರಾದಲ್ಲಿ ಒಲಿಂಪಿಕ್ ಡಬಲ್ ಪದಕ ವಿಜೇತರೊಂದಿಗೆ ಇರುವ ಭೀಮ್ ಹೇಳಿದರು.
ನೀರಜ್ ಚೋಪ್ರಾ 2021 ರಲ್ಲಿ ಟೋಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನಂತರ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಫೈನಲ್‌ನಲ್ಲಿ, ನೀರಜ್ ತಮ್ಮ ಎರಡನೇ ಪ್ರಯತ್ನದಲ್ಲಿ 89.45 ಮೀಟರ್ ದೂರ ಎಸೆಯುವ ರಜತ ಪದಕ ಗೆದ್ದರು. ಒಲಿಂಪಿಕ್ ವಿಜಯದ ನಂತರ, ನೀರಜ್ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಿ, ಮತ್ತೊಮ್ಮೆ ಎರಡನೇ ಸ್ಥಾನ ಪಡೆದರು.