ವಾರಣಾಸಿ, ಜೂನ್ 21: ಪರ್ಯಾಯ ಸಂಚಾರದ ನಿಮಿತ್ತ ವಾರಣಾಸಿಗೆ ಆಗಮಿಸಿದ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಅತ್ಯಂತ ಪ್ರಾಚೀನ ವಿದ್ಯಾಸಂಸ್ಥೆಯಾದ ಕಾಶೀ ಹಿಂದೂ ವಿಶ್ವವಿದ್ಯಾಲಯದ ಮಾಲವೀಯ ಭವನದಲ್ಲಿ ಗೌರವಾದರಗಳಿಂದ ಸ್ವಾಗತಿಸಿ ಭಗವದ್ಗೀತಾ ಉಪನ್ಯಾಸವನ್ನು ಆಯೋಜಿಸಿದರು. ಅಂತರರಾಷ್ಟ್ರೀಯ ಯೋಗ ದಿವಸದ ಹಿನ್ನೆಲೆಯಲ್ಲಿ ಗೀತಾ ಯೋಗದ ಆವಶ್ಯಕತೆಯನ್ನು ಪುತ್ತಿಗೆ ಶ್ರೀಪಾದರು ವಿವರಿಸಿದರು.
ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಗೀತಾ ಲೇಖನ ಯಜ್ಞದ ಮಹತ್ವವನ್ನು ತಿಳಿಸಿದರು. ವೇದಿಕೆಯಲ್ಲಿ ಮಾಲವೀಯ ಭವನದ ನಿರ್ದೇಶಕರಾದ ಪ್ರೊ. ರಾಜಾರಾಮ್ ಶುಕ್ಲ, ಕಾಶಿಯ ಸಂಪೂರ್ಣಾನಂದ ವಿಶ್ವವಿದ್ಯಾಲಯದ ಸಂಸ್ಕೃತ ಉಪನ್ಯಾಸಕರಾದ ಪ್ರೊ. ವ್ರಜಭೂಷಣ ಓಝಾ ಮುಂತಾದವರು ಉಪಸ್ಥಿತರಿದ್ದರು.