ನವದೆಹಲಿ: 24 ಗಂಟೆಗಳಲ್ಲಿ ದೇಶಾದ್ಯಂತ 26,041 ಹೊಸ ಪಾಸಿಟಿವ್ ಪ್ರಕರಣಗಳು (ಕೇರಳ-15,951) ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ತಿಳಿಸಿದೆ.
ಇದೇ ವೇಳೆ 29,621 ಮಂದಿ ಕಳೆದ 24 ತಾಸಿನಲ್ಲಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು 2,99,620 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 3,29,31,972 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 276 ಮಂದಿ (ಕೇರಳ-165) ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಒಟ್ಟು 4,47,194 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 38,18,362 ಡೋಸ್ ಲಸಿಕೆ ನೀಡಲಾಗಿದೆ, ಇಲ್ಲಿಯವರೆಗೆ 86,01,59,011 ಡೋಸ್ ಲಸಿಕೆ ನೀಡಲಾಗಿದೆ.