ನವದೆಹಲಿ: ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಮತ್ತೊಮ್ಮೆ ಏರಿಸಲಾಗಿದೆ. 19 ಕೆಜಿ ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ ಬೆಲೆ 2253 ರೂ.ನಿಂದ 2355.50 ರೂ.ಗೆ ಏರಿಕೆಯಾಗಿದೆ.
ಪ್ರತಿ ಸಿಲಿಂಡರ್ ಮೇಲೆ ರೂ. 102.50 ಹೆಚ್ಚಿಸಲಾಗಿದೆ. 5 ಕೆಜಿ ಎಲ್ಪಿಜಿ ಸಿಲಿಂಡರ್ನ ಬೆಲೆ 655 ರೂ. ಆಗಿರುತ್ತದೆ. ಈ ಬೆಲೆ ಏರಿಕೆ ಆಗಿರುವುದು ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ಗಳಲ್ಲಿ ಅಲ್ಲ.
ಉಕ್ರೇನ್ ಬಿಕ್ಕಟ್ಟು ಮತ್ತು ಜಾಗತಿಕ ಇಂಧನ ಬೆಲೆಗಳ ಹೆಚ್ಚಳದ ಹಿನ್ನೆಲೆಯಲ್ಲಿ ಬೆಲೆಗಳಲ್ಲಿ ಹೆಚ್ಚಳವಾಗಿದೆ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಮಾರ್ಚ್ 22 ರಂದು ಸಬ್ಸಿಡಿ ಹೊಂದಿರುವ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ನಲ್ಲಿ ರೂ. 50 ಏರಿಕೆಯಾಗಿದೆ.