ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿ ಸಂದರ್ಭದಲ್ಲಿ ಭದ್ರತಾ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸುದ್ಧಿ ಸಂಸ್ಥೆ ಎ.ಎನ್.ಐ ಜೊತೆಗೆ ಮಾತನಾಡಿದ ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಮೊದಲ ಭದ್ರತಾ ಲೋಪವೆಂದರೆ ಅಂದು ಸ್ಥಳದಲ್ಲಿ ಡಿಜಿಪಿ ಇರಲಿಲ್ಲ. ರಾಜ್ಯ ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿಗಳು ಕೂಡ ಅಲ್ಲಿ ಹಾಜರಿರಲಿಲ್ಲ. ಜಿಲ್ಲಾಧಿಕಾರಿ ಕೂಡ ಅಂದು ಗೈರು ಹಾಜರಾಗಿದ್ದರು.
ಇದು ಪೂರ್ವ ಯೋಜಿತ ಪಿತೂರಿಯೇ? ಪ್ರಧಾನಿಯ ಮೇಲೆ ಗುಂಪು ದಾಳಿಯ ಸಂಚು ನಡೆದಿರಬಹುದೇ ಎಂದು ಕಿರಣ್ ಬೇಡಿ ಪ್ರಶ್ನಿಸಿದ್ದಾರೆ.