ನವದೆಹಲಿ, ಜೂ.28: ಹಿಂದಿ ಭಾಷೆಯ ಪ್ರಚಾರಕ್ಕಾಗಿ ಭಾರತ ವಿಶ್ವಸಂಸ್ಥೆಗೆ 1.16 ಮಿಲಿಯನ್ ಡಾಲರ್ ಕೊಡುಗೆ ನೀಡಿದೆ. ಭಾರತದ ಖಾಯಂ ಮಿಷನ್‌ನ ಪ್ರಭಾರ ಅಧಿಕಾರಿ ಆರ್. ರವೀಂದ್ರ ಅವರುಗುರುವಾರ ವಿಶ್ವಸಂಸ್ಥೆಯ ಜಾಗತಿಕ ಸಂವಹನ ವಿಭಾಗದ (ಡಿಜಿಸಿ) ವಾರ್ತಾ ಮತ್ತು ಮಾಧ್ಯಮ ವಿಭಾಗದ ನಿರ್ದೇಶಕ ಇಯಾನ್ ಫಿಲಿಪ್ಸ್ ಅವರಿಗೆ ಹಿಂದಿ ಯುಎನ್ ಯೋಜನೆಗಾಗಿ ಚೆಕ್ ಅನ್ನು ಹಸ್ತಾಂತರಿಸಿದರು. ಹಿಂದಿ ಭಾಷೆಯಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಸಂಪರ್ಕವನ್ನು ಹೆಚ್ಚಿಸಲು ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಹಿಂದಿ ಮಾತನಾಡುವ ಜನರಲ್ಲಿ ಜಾಗತಿಕ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಹಿಂದಿ ಯುಎನ್ ಯೋಜನೆಯನ್ನು ಪ್ರಾರಂಭಿಸಿದಾಗ ಭಾರತವು 2018 ರಿಂದ ಡಿಜಿಸಿಯೊಂದಿಗೆ ಪಾಲುದಾರಿಕೆ ಹೊಂದಿದೆ.
ಹಿಂದಿ ಪ್ರಚಾರಕ್ಕಾಗಿ ವಿಶ್ವಸಂಸ್ಥೆಗೆ ಭಾರತದಿಂದ 1.16 ಮಿಲಿಯನ್ ಡಾಲರ್ ಕೊಡುಗೆ
ಹಿಂದಿ ಪ್ರಚಾರಕ್ಕಾಗಿ ವಿಶ್ವಸಂಸ್ಥೆಗೆ ಭಾರತದಿಂದ 1.16 ಮಿಲಿಯನ್ ಡಾಲರ್ ಕೊಡುಗೆ
Date: