ನವದೆಹಲಿ: ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೊಮ್ಮೆ ಏರಿಕೆಯಾಗಿದೆ.
ನವದೆಹಲಿಯಲ್ಲಿ ಪೆಟ್ರೋಲ್ (106.19 ಲೀ) ಮತ್ತು ಡೀಸೆಲ್ (94.92 ಲೀ) ಬೆಲೆ ಲೀಟರಿಗೆ ತಲಾ 35 ಪೈಸೆ ಏರಿಕೆಯಾಗಿದೆ. ಮುಂಬಯಿಯಲ್ಲಿ ಪೆಟ್ರೋಲ್ (112.11 ಲೀ) ಲೀಟರಿಗೆ 34 ಪೈಸೆ ಏರಿಕೆಯಾದರೆ ಡೀಸೆಲ್ (102.89 ಲೀ) ದರ 37 ಪೈಸೆ ಹೆಚ್ಚಳವಾಗಿದೆ.