ಮುಂಬಯಿ: ಯುದ್ಧಗ್ರಸ್ಥ ಉಕ್ರೇನ್ ನಲ್ಲಿ ಸಿಲುಕಿದ 219 ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿದೆ. ಇಂದು ಮಧ್ಯಾಹ್ನ 219 ಭಾರತೀಯರೊಂದಿಗೆ ರೋಮೇನಿಯಾ ರಾಜಧಾನಿ ಬುಕಾರೆಸ್ಟ್ ನಿಂದ ಟೇಕ್ ಆಫ್ ಆದ ಏರ್ ಇಂಡಿಯಾ ವಿಮಾನ ಇಂದು ಸಂಜೆ ಮುಂಬಯಿಯಲ್ಲಿ ಲ್ಯಾಂಡ್ ಆಗಿದೆ.
ಉಕ್ರೇನ್ ನಲ್ಲಿರುವ ಭಾರತೀಯ ನಾಗರಿಕರನ್ನು ಮೊದಲಿಗೆ ಪೊಲ್ಯಾಂಡ್, ರೋಮೇನಿಯಾ, ಹಂಗೇರಿಯಾ ಮತ್ತು ಸ್ಲೊವಾಕ್ ರಿಪಬ್ಲಿಕ್ ಸೇರಿ ಉಕ್ರೇನ್ ನೆರೆ ರಾಷ್ಟ್ರಗಳಿಗೆ ಸ್ಥಳಾಂತರಿಸಿದ ನಂತರ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ‘ಆಪರೇಷನ್ ಗಂಗಾ’ ಯೋಜನೆ ರೂಪಿಸಿದೆ. ಅದರಂತೆ ಮೊದಲ ವಿಮಾನ ಇಂದು ಸಂಜೆ ಮುಂಬಯಿ ತಲುಪಿದೆ.
250 ಭಾರತೀಯರನ್ನು ಮತ್ತೊಂದು ವಿಮಾನ ಕರೆತರುತ್ತಿದ್ದು ರೋಮೇನಿಯಾ ರಾಜಧಾನಿಯಿಂದ ಟೇಕ್ ಆಫ್ ಆಗಿದೆ. ಕೆಲವೇ ಗಂಟೆಗಳಲ್ಲಿ ನವದೆಹಲಿಯಲ್ಲಿ ಲ್ಯಾಂಡ್ ಆಗಲಿದೆ.