ಚೆನ್ನೈ, ನ.30: ಚೆನ್ನೈನಲ್ಲಿ ಫೆನ್ಗಲ್ ಚಂಡಮಾರುತದ ಅಬ್ಬರ ತೀವ್ರವಾಗುತ್ತಿದೆ. ಶನಿವಾರ ಭಾರೀ ಮಳೆಯಿಂದ ಚೆನ್ನೈನಲ್ಲಿಯ ಎಟಿಎಂ ಒಂದರಲ್ಲಿ ನೆರೆ ನೀರು ತುಂಬಿದ್ದು, ವಲಸೆ ಕಾರ್ಮಿಕನೊಬ್ಬ ಹಣ ತೆಗೆಯುವಾಗ ವಿದ್ಯುದಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಚಂಡಮಾರುತದ ಪ್ರಭಾವದಿಂದ ಮನೆಗಳು ಮತ್ತು ಆಸ್ಪತ್ರೆಗಳಲ್ಲಿ ನೆರೆ ನೀರು ತುಂಬಿದ ಕಾರಣ ಆಸ್ಪತ್ರೆಯ ಸಿಬ್ಬಂದಿಗಳು ಮರಳಿನ ಚೀಲಗಳನ್ನು ಇರಿಸಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ವ್ಯತ್ಯಯ ಉಂಟಾಗಿದೆ. ಜೋರಾಗಿ ಬೀಸುತ್ತಿರುವ ಗಾಳಿಗೆ ಶ್ರೀಪೆರಂಬುದುರ್ ನಲ್ಲಿ ಟ್ರಾಫಿಕ್ ದೀಪಗಳು ರಸ್ತೆಗುರುಳಿದ್ದು, ರಸ್ತೆಯಲ್ಲಿದ್ದ ಬ್ಯಾರಿಕೇಡ್ ಗಳು ದೂರ ಎಸೆಯಲ್ಪಟ್ಟಿವೆ.
ಫೆನ್ಗಲ್ ಚಂಡಮಾರುತ: ಎಟಿಎಂ ನಿಂದ ಹಣ ತೆಗೆಯುವಾಗ ವಲಸೆ ಕಾರ್ಮಿಕ ಬಲಿ
ಫೆನ್ಗಲ್ ಚಂಡಮಾರುತ: ಎಟಿಎಂ ನಿಂದ ಹಣ ತೆಗೆಯುವಾಗ ವಲಸೆ ಕಾರ್ಮಿಕ ಬಲಿ
Date: