ನವದೆಹಲಿ, ಜೂ.1: ಶನಿವಾರ ಸಂಜೆ ಲೋಕಸಭೆಯ ಏಳನೇ ಮತ್ತು ಅಂತಿಮ ಹಂತದ ಚುನಾವಣೆ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲೂ ಬಿಜೆಪಿ ನೇತೃತ್ವದ ಎನ್.ಡಿ.ಎಗೆ ಬಹುಮತ ಸಿಗಲಿದೆ ಎಂದು ಹೇಳಲಾಗಿದೆ. ನ್ಯೂಸ್ ನೇಷನ್ ಸಮೀಕ್ಷೆ ಪ್ರಕಾರ ಎನ್.ಡಿ.ಎಗೆ 378, ಇ.ಎನ್.ಡಿ.ಐ.ಎಗೆ 169, ಇತರರು 23. ಲೋಕ ಪೋಲ್ ಸಮೀಕ್ಷೆಗಳ ಪ್ರಕಾರ ಎನ್.ಡಿ.ಎಗೆ 335, ಐ.ಎನ್.ಡಿ.ಐ.ಎ ಗೆ 165 ಮತ್ತು ಇತರರು 55. ಜೀನ್ಯೂಸ್ ಪ್ರಕಾರ ಎನ್.ಡಿ.ಎಗೆ 367, ಐ.ಎನ್.ಡಿ.ಐ.ಎ 133 ಮತ್ತು ಇತರರು 68. ರಿಪಬ್ಲಿಕ್ ಟಿವಿ ಪ್ರಕಾರ ಎನ್.ಡಿ.ಎ 359, ಐ.ಎನ್.ಡಿ.ಐ.ಎ 154, ಇತರರು 30. ಇಂಡಿಯಾ ನ್ಯೂಸ್ ಪ್ರಕಾರ ಎನ್.ಡಿ.ಎ 371, ಐ.ಎನ್.ಡಿ.ಐ.ಎ 125, ಇತರರು 47. ಮ್ಯಾಟ್ ರೈಸ್ ಪ್ರಕಾರ ಎನ್.ಡಿ.ಎ 353 -368, ಐ.ಎನ್.ಡಿ.ಐ.ಎ 118-133, ಇತರರು 43-48. ಜನ್ ಕಿ ಬಾತ್ ಪ್ರಕಾರ ಎನ್.ಡಿ.ಎ 362-392, ಐ.ಎನ್.ಡಿ.ಐ.ಎ 141-161, ಇತರರು 10-20.
ಸಿ.ಎನ್.ಎನ್ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 21 ರಿಂದ 24, ಕಾಂಗ್ರೆಸ್ ಗೆ 3 ರಿಂದ 7 ಮತ್ತು ಜೆಡಿಎಸ್ ಗೆ 1 ರಿಂದ 3 ಸ್ಥಾನಗಳು ಸಿಗಲಿದೆ. ಇಂಡಿಯಾ ಟುಡೇ ಸಮೀಕ್ಷೆಗಳ ಪ್ರಕಾರ ಕರ್ನಾಟದಲ್ಲಿ ಬಿಜೆಪಿ 23-25, ಕಾಂಗ್ರೆಸ್ 3-5 ಮತ್ತು ಜೆಡಿಎಸ್ 2 ರಿಂದ 3.