Sunday, February 23, 2025
Sunday, February 23, 2025

ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆಗಳ ಇ-ಹರಾಜು ಆರಂಭ

ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆಗಳ ಇ-ಹರಾಜು ಆರಂಭ

Date:

ನವದೆಹಲಿ, ಸೆ.17: ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿದ ಉಡುಗೊರೆಗಳ ಇ-ಹರಾಜು ಇಂದು (ಮಂಗಳವಾರ) ಆರಂಭವಾಗಿದೆ. ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇ-ಹರಾಜಿನಲ್ಲಿ ಭಾಗವಹಿಸುವಂತೆ ಜನರನ್ನು ವಿನಂತಿಸಿದ್ದಾರೆ. ಹಾರಜಿನಿಂದ ಬಂದ ಹಣವನ್ನು ನಮಾಮಿ ಗಂಗೆ ನಿಧಿಗೆ ಕೊಡುಗೆ ನೀಡಲಾಗುವುದು. ಈ ವರ್ಷ ಆರನೇ ಕಂತು ಹರಾಜಾಗಿದೆ ಎಂದು ಅವರು ಹೇಳಿದರು. ಇದನ್ನು ಆರಂಭದಲ್ಲಿ 2019 ರಲ್ಲಿ ಪ್ರಾರಂಭಿಸಲಾಯಿತು.

ಜನರು ಇಂದಿನಿಂದ ತಮ್ಮ ನೆಚ್ಚಿನ ಸ್ಮರಣಿಕೆಯನ್ನು ಬಿಡ್ ಮಾಡಬಹುದು. ಆನ್‌ಲೈನ್ ಹರಾಜು ಅಕ್ಟೋಬರ್ 2ರವರೆಗೆ ಮುಂದುವರಿಯಲಿದೆ. ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ವ್ಯಕ್ತಿಗಳು ಅಧಿಕೃತ ವೆಬ್‌ಸೈಟ್ https://pmmementos.gov.in ಮೂಲಕ ನೋಂದಾಯಿಸಿಕೊಳ್ಳಬಹುದು ಮತ್ತು ಭಾಗವಹಿಸಬಹುದು. ಈ ವರ್ಷ ಸುಮಾರು ಆರುನೂರು ಸ್ಮರಣಿಕೆಗಳನ್ನು ಹರಾಜಿಗಾಗಿ ಪ್ರದರ್ಶಿಸಲಾಗಿದೆ, ಇದರಲ್ಲಿ ವಿಶಿಷ್ಟ ಕಲಾಕೃತಿಗಳು, ಸೂಕ್ಷ್ಮವಾಗಿ ರಚಿಸಲಾದ ದೇವಾಲಯದ ಮಾದರಿಗಳು, ಹಿಂದೂ ದೇವತೆಗಳು ಮತ್ತು ಪ್ಯಾರಾಲಿಂಪಿಯನ್‌ ಪದಕ ವಿಜೇತರು ಪ್ರಧಾನಿಯವರಿಗೆ ತಮ್ಮ ಹಸ್ತಾಕ್ಷರ ಸಹಿತ ನೀಡಿದ ವಿವಿಧ ವಸ್ತುಗಳು ಸೇರಿವೆ ಪಾದರಕ್ಷೆಗಳು ಸೇರಿವೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!