ನವದೆಹಲಿ, ಸೆ.26: ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್, ಡಿಆರ್‌ಡಿಒ ಭಾರತೀಯ ತಂತ್ರಜ್ಞಾನ ಸಂಸ್ಥೆ, ಐಐಟಿ ದೆಹಲಿಯೊಂದಿಗೆ ಸುಧಾರಿತ ಬ್ಯಾಲಿಸ್ಟಿಕ್ಸ್ ಲೈಟ್ ವೇಟ್ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಅಭಿವೃದ್ಧಿಪಡಿಸಲು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಬಗ್ಗೆ ಮಾತನಾಡಿದ ಡಿಆರ್‌ಡಿಒ ಕಾರ್ಯದರ್ಶಿ ಡಾ. ಸಮೀರ್ ವಿ ಕಾಮತ್ ಅವರು, ಡಿಆರ್‌ಡಿಒ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯ ಪರಿಣಾಮಕಾರಿ ಮಿಶ್ರಣದ ಫಲವೇ ಈ ಲೈಟ್ ವೇಟ್ ಬುಲೆಟ್ ಪ್ರೂಫ್ ಜಾಕೆಟ್ ಎಂದು ಹೇಳಿದರು. ಪಾಲಿಮರ್‌ಗಳು ಮತ್ತು ಸ್ಥಳೀಯ ಬೋರಾನ್ ಕಾರ್ಬೈಡ್ ಸೆರಾಮಿಕ್ ವಸ್ತುಗಳಿಂದ ಜಾಕೆಟ್‌ಗಳನ್ನು ರಚಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿಪಡಿಸಲು ಐಐಟಿ ದೆಹಲಿ- ಡಿಆರ್‌ಡಿಒ ಒಪ್ಪಂದ

ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿಪಡಿಸಲು ಐಐಟಿ ದೆಹಲಿ- ಡಿಆರ್‌ಡಿಒ ಒಪ್ಪಂದ
Date: