ಲಕ್ನೋ, ಸೆ.5: ರಷ್ಯಾ-ಉಕ್ರೇನ್ ಯುದ್ಧ, ಇಸ್ರೇಲ್-ಹಮಾಸ್ ಸಂಘರ್ಷಗಳು ಮತ್ತು ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯಂತಹ ಘಟನೆಗಳನ್ನು ವಿಶ್ಲೇಷಿಸಲು ಮತ್ತು ಯಾವುದೇ ಅನಿರೀಕ್ಷಿತ ಸವಾಲುಗಳಿಗೆ ಸಿದ್ಧರಾಗಿರಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಶಸ್ತ್ರ ಪಡೆಗಳ ಉನ್ನತ ಕಮಾಂಡರ್‌ಗಳಿಗೆ ಕರೆ ನೀಡಿದರು. ಉನ್ನತ ಮಟ್ಟದ ಸೇನಾ ನಾಯಕತ್ವ ಸಭೆಯ ಎರಡನೇ ಮತ್ತು ಅಂತಿಮ ದಿನದಂದು, ರಕ್ಷಣಾ ಸಚಿವರು ಉತ್ತರ ಪ್ರದೇಶದ ಲಕ್ನೋದಲ್ಲಿ ಜಂಟಿ ಕಮಾಂಡರ್‌ಗಳ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಭಾರತ ಶಾಂತಿ ಪ್ರಿಯ ರಾಷ್ಟ್ರವಾಗಿದ್ದು, ಶಾಂತಿ ಕಾಪಾಡಲು ಸಶಸ್ತ್ರ ಪಡೆಗಳು ಯುದ್ಧಕ್ಕೆ ಸಜ್ಜಾಗಬೇಕಿದೆ. ಉತ್ತರದ ಗಡಿಯಲ್ಲಿನ ಪರಿಸ್ಥಿತಿ ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಯೊಡ್ಡುತ್ತಿರುವ ನೆರೆಯ ದೇಶಗಳಲ್ಲಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಹಿರಿಯ ಮಿಲಿಟರಿ ನಾಯಕತ್ವದಿಂದ ಹೆಚ್ಚು ಸಮಗ್ರ ಮತ್ತು ಆಳವಾದ ವಿಶ್ಲೇಷಣೆಯ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.
ಸನ್ನದ್ಧರಾಗಿ: ಸೇನಾ ಮುಖ್ಯಸ್ಥರಿಗೆ ಕರೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಸನ್ನದ್ಧರಾಗಿ: ಸೇನಾ ಮುಖ್ಯಸ್ಥರಿಗೆ ಕರೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
Date: