ನವದೆಹಲಿ: ಹೊಸ ವರ್ಷದ ಆರಂಭದಲ್ಲೇ ಹೊಟೇಲ್, ರೆಸ್ಟೋರೆಂಟ್, ಚಹಾ ಅಂಗಡಿಗಳನ್ನು ನಡೆಸುವವರಿಗೆ ಸಿಹಿ ಸುದ್ಧಿ ಸಿಕ್ಕಿದೆ.

ಕಮರ್ಷಿಯಲ್ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ ರೂ. 102.50 ಕಡಿತವಾಗಿದೆ. ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಸಿಲಿಂಡರ್ ಗಳ ಬೆಲೆಯನ್ನು ಜನವರಿ 1 2022 ರಿಂದ ಅನ್ವಯವಾಗುವಂತೆ ರೂ. 102.50 ಕಡಿತಗೊಳಿಸಿದ್ದಾರೆ.
ಉಳಿದಂತೆ ಗೃಹ ಬಳಕೆಯ 14.2 ಕೆಜಿ, 5 ಕೆಜಿ ಮತ್ತು 10 ಕೆಜಿ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಕಡಿತವಾಗಿಲ್ಲ.