ಕಾನ್ಪುರ, ಜ.11: ನಿರ್ಮಾಣ ಹಂತದ ಕಟ್ಟಡದ ಸೀಲಿಂಗ್ ಸ್ಲ್ಯಾಬ್ ಇದ್ದಕ್ಕಿದ್ದಂತೆ ಕುಸಿದ ಘಟನೆ ಕನ್ನೌಜ್ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದೆ. ಹಲವಾರು ಕಾರ್ಮಿಕರು ಮತ್ತು ರೈಲ್ವೆ ಸಿಬ್ಬಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುಮಾರು 40 ಜನರು ಸ್ಥಳದಲ್ಲಿದ್ದರು. ಗಂಭೀರ ಗಾಯಾಳುಗಳಾದ ಐದು ಜನರನ್ನು ಚಿಕಿತ್ಸೆಗಾಗಿ ಲಕ್ನೋಗೆ ಕಳುಹಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರ ಗಾಯಾಳುಗಳಿಗೆ ರೂ.2.5 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ ರೂ.50,000 ಸಹಾಯವನ್ನು ಘೋಷಿಸಿದೆ. ಅಮೃತ ಭಾರತ್ ಯೋಜನೆಯಡಿ ನಿಲ್ದಾಣವನ್ನು ನವೀಕರಿಸಲಾಗುತ್ತಿತ್ತು ಮತ್ತು ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗುತ್ತಿತ್ತು. ಸೀಲಿಂಗ್ ಸ್ಲ್ಯಾಬ್ ಹಾಕುವ ಕೆಲಸ ನಡೆಯುತ್ತಿರುವಾಗ ಮುಂಜಾನೆ ಕುಸಿತ ಸಂಭವಿಸಿದೆ. ಎಸ್‌ಡಿಆರ್‌ಎಫ್, ಜಿಆರ್‌ಪಿ, ಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿದ್ದವು.
ರೈಲು ನಿಲ್ದಾಣದ ಸೀಲಿಂಗ್ ಸ್ಲ್ಯಾಬ್ ಕುಸಿತ: ಹಲವರಿಗೆ ಗಾಯ
ರೈಲು ನಿಲ್ದಾಣದ ಸೀಲಿಂಗ್ ಸ್ಲ್ಯಾಬ್ ಕುಸಿತ: ಹಲವರಿಗೆ ಗಾಯ
Date: