ನವದೆಹಲಿ, ಸೆ.14: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಇ) ರಾಜಸ್ಥಾನ ಮತ್ತು ದೆಹಲಿಯ 27 ಶಾಲೆಗಳಿಗೆ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಶೋಕಾಸ್ ನೋಟಿಸ್ ನೀಡಿದೆ. ವಿಶೇಷವಾಗಿ ದಾಖಲಾತಿ ಮತ್ತು ಹಾಜರಾತಿಗೆ ಸಂಬಂಧಿಸಿದಂತೆ ಹಲವಾರು ಉಲ್ಲಂಘನೆಗಳನ್ನು ಪತ್ತೆಹಚ್ಚಲಾಗಿದೆ ಎಂದು ಸಿ.ಬಿ.ಎಸ್.ಇ ಪ್ರಕಟಣೆಯಲ್ಲಿ ತಿಳಿಸಿದೆ. ಶಾಲೆಗಳು 11 ಮತ್ತು 12 ನೇ ತರಗತಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿದ್ದು, ಅವರು ತರಗತಿಗಳಿಗೆ ಹಾಜರಾಗುತ್ತಿಲ್ಲ ಎಂದು ತಪಾಸಣೆಯಿಂದ ತಿಳಿದುಬಂದಿದೆ. ಈ ಶಾಲೆಗಳು ನಿರ್ವಹಿಸುವ ಹಾಜರಾತಿ ದಾಖಲೆಗಳಲ್ಲಿಯೂ ವ್ಯತ್ಯಾಸಗಳು ಪತ್ತೆಯಾಗಿವೆ ಎಂದು ಮಂಡಳಿ ತಿಳಿಸಿದೆ.
ನಿಯಮ ಉಲ್ಲಂಘಿಸಿದ 27 ಶಾಲೆಗಳಿಗೆ ಸಿ.ಬಿ.ಎಸ್.ಇ ಶೋಕಾಸ್ ನೋಟಿಸ್
ನಿಯಮ ಉಲ್ಲಂಘಿಸಿದ 27 ಶಾಲೆಗಳಿಗೆ ಸಿ.ಬಿ.ಎಸ್.ಇ ಶೋಕಾಸ್ ನೋಟಿಸ್
Date: