ನವದೆಹಲಿ, ಸೆ.9: ದೆಹಲಿಯ ಮಾಲಿನ್ಯ ನಿಯಂತ್ರಣ ಸಮಿತಿಯ (ಡಿಪಿಸಿಸಿ) ಎಂಜಿನಿಯರ್ ಮತ್ತು ಮಧ್ಯವರ್ತಿ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಲಂಚ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. 91 ಸಾವಿರಕ್ಕೂ ಅಧಿಕ ಮೊತ್ತದ ಲಂಚದ ಮೊತ್ತವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾಗ ತಂಡವು ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ. ಶೋಧದ ವೇಳೆ ಇಂಜಿನಿಯರ್ ಬಳಿ ಇದ್ದ ಸುಮಾರು 2.39 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವರದಿ ಮಾಡಿದೆ. ಸಂಸ್ಥೆಗಳಿಗೆ ಡಿಪಿಸಿಸಿ ಒಪ್ಪಿಗೆ ನೀಡಲು ಭ್ರಷ್ಟಾಚಾರದಲ್ಲಿ ತೊಡಗಿರುವ ಇಂಜಿನಿಯರ್ ಮತ್ತು ನಾಲ್ವರು ಮಧ್ಯವರ್ತಿಗಳ ವಿರುದ್ಧ ತನಿಖಾ ಸಂಸ್ಥೆ ಪ್ರಕರಣ ದಾಖಲಿಸಿದೆ.
ಲಂಚ ಪ್ರಕರಣ: ಡಿಪಿಸಿಸಿ ಇಂಜಿನಿಯರ್ ಮತ್ತು ಮಧ್ಯವರ್ತಿ ಸಿಬಿಐ ಬಲೆಗೆ
ಲಂಚ ಪ್ರಕರಣ: ಡಿಪಿಸಿಸಿ ಇಂಜಿನಿಯರ್ ಮತ್ತು ಮಧ್ಯವರ್ತಿ ಸಿಬಿಐ ಬಲೆಗೆ
Date: