Monday, November 25, 2024
Monday, November 25, 2024

ಕೇಂದ್ರ ಬಜೆಟ್- ಡಿಜಿಟಲ್ ಕರೆನ್ಸಿ ಪರಿಚಯಿಸಲು ಸಿದ್ಧತೆ

ಕೇಂದ್ರ ಬಜೆಟ್- ಡಿಜಿಟಲ್ ಕರೆನ್ಸಿ ಪರಿಚಯಿಸಲು ಸಿದ್ಧತೆ

Date:

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2022-23ನೇ ಸಾಲಿನ 39 ಲಕ್ಷ 54 ಸಾವಿರ ಕೋಟಿ ರೂ. ಗಾತ್ರದ ಮುಂಗಡ ಪತ್ರ ಮಂಡಿಸಿದರು. ತನ್ಮೂಲಕ ಹಣಕಾಸು ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ 4ನೇ ಬಾರಿಗೆ ಕೇಂದ್ರ ಆಯವ್ಯಯ ಮಂಡಿಸಿದ್ದಾರೆ.

ಬಜೆಟ್ ಪ್ರಮುಖಾಂಶಗಳು:

* ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

* ತೆರಿಗೆ ಪಾವತಿ ರಿಟರ್ನ್ಸ್ ಸಲ್ಲಿಕೆಗೆ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು.

* ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ತಪ್ಪು ಸರಿಪಡಿಸಲು 2 ವರ್ಷಗಳ ಕಾಲಾವಕಾಶ.

* ಫೋನ್, ಫೋನ್ ಚಾರ್ಜರ್, ಟ್ರಾನ್ಸ್ಫರ್ಮರ್ ಮೇಲಿನ ಅಬಕಾರಿ ಸುಂಕ ರಿಯಾಯಿತಿ.

* ಕತ್ತರಿಸಿದ ಹಾಗೂ ಪಾಲಿಷ್ ಮಾಡಿದ ವಜ್ರ-ರತ್ನಗಳ ಮೇಲಿನ ಸುಂಕ ಇಳಿಕೆ, ಕಸ್ಟಮ್ಸ್ ಸುಂಕವನ್ನು ಶೇಕಡ 5ಕ್ಕೆ ಇಳಿಸಲು ನಿರ್ಧಾರ.

* ’ಒಂದು ಮಾರುಕಟ್ಟೆ- ಒಂದು ತೆರಿಗೆ ಯೋಜನೆ ಘೋಷಣೆ.

* ಸರ್ಕಾರಿ ನೌಕರರಿಗೆ ಟಿಡಿಎಸ್ ಶೇಕಡ 10ರಿಂದ 14ಕ್ಕೆ ಏರಿಕೆ.

* 5 ನದಿಗಳ ಜೋಡಣೆಗೆ ಸಿದ್ಧತೆ. ಕಾವೇರಿ-ಪನ್ನಾರ್, ಗೋದಾವರಿ-ಕೃಷ್ಣ ನದಿ ಜೋಡಣೆಗೆ ಹಸಿರು ನಿಶಾನೆ

* ಮಹಿಳೆಯರು, ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ 3 ಹೊಸ ಯೋಜನೆ- ಮಿಷನ್ ಪೋಷಣ್ 2.0, ಮಿಷನ್ ವಾತ್ಸಲ್ಯ ಹಾಗೂ ಮಿಷನ್ ಶಕ್ತಿ.

* ಸಕ್ಷಮ್ ಅಂಗನವಾಡಿ ಯೋಜನೆ ಮೂಲಕ 2 ಲಕ್ಷ ಅಂಗನವಾಅಡಿ ಮೇಲ್ದರ್ಜೆಗೆ.

* ದೇಶದಲ್ಲಿ ಶೈಕ್ಷಣಿಕ ಟಿವಿ ಚ್ಯಾನಲ್ ಗಳ ಸಂಖ್ಯೆ 12ರಿಂದ 200ಕ್ಕೆ ಏರಿಕೆ.

* ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣಕ್ಕೆ 48 ಸಾವಿರ ಕೋಟಿ ವಿನಿಯೋಗ ಮಾಡಿ 2023ರ ವೇಳೆಗೆ 18 ಲಕ್ಷ ಮನೆಗಳ ನಿರ್ಮಿಸುವ ಯೋಜನೆ.

* ಮೂರು ವರ್ಷಗಳಲ್ಲಿ ವಂದೇ ಭಾರತ್ 400 ಹೊಸ ರೈಲುಗಳನ್ನು ಅನುಷ್ಠಾನಗೊಳಿಸಲಾಗುವುದು.

* 100 ಪ್ರಧಾನಮಂತ್ರಿ ಗತಿಶಕ್ತಿ ಕಾರ್ಗೊ ಟರ್ಮಿನಲ್ ಅಭಿವೃದ್ಧಿ.

* ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್.

* ರಾಷ್ಟ್ರ‍ೀಯ ಹೆದ್ದಾರಿಗಳನ್ನು 25 ಸಾವಿರ ಕಿಲೋಮೀಟರ್ ವಿಸ್ತರಣೆ.

* ಸಾರ್ವಜನಿಕ ಸಂಪನ್ಮೂಲಗಳಿಗೆ ಪೋರಕವಾಗಿ 20 ಸಾವಿರ ಕೋಟಿ ರೂ. ಕ್ರೋಡೀಕರಣ.

* 8 ಭಾಷೆಗಳಲ್ಲಿ ಆಸ್ತಿ ನೊಂದಣಿಗೆ ಅವಕಾಶ.

* 5ಜಿ ತಂತ್ರಜ್ಞಾನ ತರಂಗಾಂತರ ಹರಾಜು, ಪ್ರತಿ ಗ್ರಾಮಕ್ಕೆ ಬ್ರಾಡ್ ಬ್ಯಾಂಡ್ ಮೂಲಕ ಅಂತಾರ್ಜಾಲ ಸೇವೆ.

* ಕೃಷಿ ವಲಯಕ್ಕೆ ಆದ್ಯತೆ- ಕನಿಷ್ಠ ಬೆಂಬಲ ಬೆಲೆ ಹೆಚ್ಚಳ.

* 2022-23ನೇ ಸಾಲಿನಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಹೊಸ ಡಿಜಿಟಲ್ ಕರೆನ್ಸಿ ಜಾರಿಗೆ ತರಲಾಗುವುದು.

* ಹರ್-ಘರ್, ನಲ್-ಸೆ-ಜಲ್‌ ಕುಡಿಯುವ ನೀರಿನ ಯೋಜನೆಗಾಗಿ 2022-23ರಲ್ಲಿ 3.8 ಕೋಟಿ ಮನೆಗಳ ಸಂಪರ್ಕ. 60,000 ಕೋಟಿ ರೂಪಾಯಿ ಹಂಚಿಕೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!